Wednesday, July 6, 2022
spot_img
Homeರಾಜ್ಯಎಸ್‌ಎಸ್‌ಎಲ್‌ಸಿ ಫಲಿತಾಂಶ : 10 ವರ್ಷಗಳಲ್ಲೇ ದಾಖಲೆ ಫಲಿತಾಂಶ - 85.63 ಶೇ. ಉತ್ತೀರ್ಣ -...

ಎಸ್‌ಎಸ್‌ಎಲ್‌ಸಿ ಫಲಿತಾಂಶ : 10 ವರ್ಷಗಳಲ್ಲೇ ದಾಖಲೆ ಫಲಿತಾಂಶ – 85.63 ಶೇ. ಉತ್ತೀರ್ಣ – ವಿದ್ಯಾರ್ಥಿನಿಯರೇ ಮೇಲುಗೈ

ಬೆಂಗಳೂರು : 2021-22ನೇ ಸಾಲಿನ ಎಸ್​ಎಸ್‌ಎಲ್​ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. 85.63 ಶೇ. ಫಲಿತಾಂಶ ದಾಖಲಾಗಿದ್ದು, ಇದು ಕಳೆದ 10 ವರ್ಷಗಳಲ್ಲಿ ದಾಖಲೆಯ ಫಲಿತಾಂಶವಾಗಿದೆ. ಕೊರೋನಾ ಆತಂಕದೊಂದಿಗೆ ಪರೀಕ್ಷೆಗೆ ಹಾಜರಾಗಿದ್ದ, 8,73,884 ವಿದ್ಯಾರ್ಥಿಗಳ ಪೈಕಿ 7,30,881 ಮಂದಿ ಉತ್ತೀರ್ಣರಾಗಿದ್ದಾರೆ. 40,061 ಮಂದಿ ಗ್ರೇಸ್ ಮಾರ್ಕ್ ಮೂಲಕ ಪಾಸ್ ಆಗಿದ್ದಾರೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಒಟ್ಟು 145 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದು ಸಾಧನೆ ಮೆರೆದಿದ್ದಾರೆ. 329 ವಿದ್ಯಾರ್ಥಿಗಳು 624 ಅಂಕ, 472 ವಿದ್ಯಾರ್ಥಿಗಳು 623 ಅಂಕಗಳನ್ನು ಗಳಿಸಿದ್ದಾರೆ.

ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಅವರು ಫಲಿತಾಂಶ ಪ್ರಕಟಿಸಿದ್ದು, ಮಧ್ಯಾಹ್ನ 1 ಗಂಟೆ ಬಳಿಕ ವಿದ್ಯಾರ್ಥಿಗಳಿಗೆ ಮಂಡಳಿ ವೆಬ್‌ ಸೈಟ್‌ನಲ್ಲಿ ಫಲಿತಾಂಶ ಲಭ್ಯವಾಗಿದೆ.











---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!