ಹೊಸದಿಲ್ಲಿ : ಮಗಳು ಶೀನಾ ಬೋರಾ ಕೊಲೆ ಪ್ರಕರಣದಲ್ಲಿ 2015 ರಿಂದ ಜೈಲಿನಲ್ಲಿರುವ ಇಂದ್ರಾಣಿ ಮುಖರ್ಜಿಗೆ ಜಾಮೀನು ದೊರಕಿದ್ದು ಬಿಡುಗಡೆಯ ಭಾಗ್ಯ ಸಿಗಲಿದೆ. ಇಂದ್ರಾಣಿ ಮುಂಬಯಿಯ ಬೈಕುಲ್ಲಾ ಮಹಿಳಾ ಕಾರಾಗೃಹದಲ್ಲಿ ಇದ್ದು, ಅವರ ಅನೇಕ ಜಾಮೀನು ಅರ್ಜಿಗಳನ್ನು ವಿಶೇಷ ಸಿಬಿಐ ನ್ಯಾಯಾಲಯ ತಿರಸ್ಕರಿಸಿತ್ತು. ಆದರೆ ಈಗಾಗಲೇ 6.5 ವರ್ಷ ದೀರ್ಘ ಸಮಯ ಜೈಲಿನಲ್ಲಿ ಕಳೆದಿರುವುದರಿಂದ ಜಾಮೀನು ಪಡೆಯಲು ಯೋಗ್ಯರಾಗಿದ್ದಾರೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ. 2012ರಲ್ಲಿ ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ಇಂದ್ರಾಣಿ ಮುಖರ್ಜಿ ವಿಚಾರಣೆ ಎದುರಿಸುತ್ತಿದ್ದು ಈ ಪ್ರಕರಣವು ಇಡೀ ದೇಶದ ಗಮನ ಸೆಳೆದಿತ್ತು.
Recent Comments
ಕಗ್ಗದ ಸಂದೇಶ
on