ಕಾರ್ಕಳ : ಭವಿಷ್ಯನಿಧಿ, ಟೈಲರ್ಸ್ಗಳ ಮಕ್ಕಳಿಗೆ ವಿದ್ಯಾರ್ಥಿವೇತನ ಸೇರಿದಂತೆ ಇನ್ನಿತರ ಬೇಡಿಕೆ ಈಡೇರಿಸುವಂತೆ ಕೆ.ಎಸ್.ಟಿ.ಎ. ರಾಜ್ಯ ಸಮಿತಿಯ ನಿಯೋಗ ಸಚಿವ ಸುನಿಲ್ ಕುಮಾರ್ ಅವರಿಗೆ ಮನವಿ ಮಾಡಿಕೊಂಡಿತು. ಮೇ 18ರಂದು ಕಾರ್ಕಳ ಶಾಸಕರ ಕಚೇರಿಯಲ್ಲಿ ರಾಜ್ಯ ಸಮಿತಿಯ ಅಧ್ಯಕ್ಷ ನಾರಾಯಣ್ ಅವರ ನೇತೃತ್ವದ ನಿಯೋಗ ಮನವಿ ಸಲ್ಲಿಸಿತು. ಸಂಘದ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಕುಮಾರ್, ಉಡುಪಿ ಕ್ಷೇತ್ರ ಸಮಿತಿಯ ದಯಾನಂದ ಕೋಟ್ಯಾನ್ ಕೊರಂಗ್ರಪಾಡಿ, ದಯಾನಂದ ಪ್ರಭು, ದಿನೇಶ್ ಭಟ್, ಮೀನಾಕ್ಷಿ ಆಚಾರ್ಯ, ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುರೇಶ್ ಪಾಲನ್, ಯೋಗೀಶ್ ಕಾಮತ್, ಕಾರ್ಕಳ ಕ್ಷೇತ್ರ ಸಮಿತಿಯ ಪದಾಧಿಕಾರಿಗಳು ಈ ಸಂದರ್ಭದಲ್ಲಿದ್ದರು.
Recent Comments
ಕಗ್ಗದ ಸಂದೇಶ
on