ಕಾರ್ಕಳ : ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಗೃಹ ವಿದ್ಯುತ್ ಬಳಕೆದಾರರಿಗೆ ಉಚಿತ ವಿದ್ಯುತ್ ಪೂರೈಕೆ ಪ್ರಮಾಣವನ್ನು 75 ಯೂನಿಟ್‌ಗೆ ಹೆಚ್ಚಳ ಮಾಡುವ ಮೂಲಕ ರಾಜ್ಯ ಸರಕಾರ ದಲಿತರ ಅಭ್ಯುದಯ ಬಯಸಿದೆ ಎಂದು ಕಾರ್ಕಳ ಬಿಜೆಪಿ ಎಸ್‌ಸಿ ಮೋರ್ಚಾ ಉಸ್ತುವಾರಿ ಶ್ರೀನಿವಾಸ್ ಕಾರ್ಲ ಹೇಳಿದರು. 40 ಯೂನಿಟ್ ಇದ್ದ ಉಚಿತ ವಿದ್ಯುತ್ ಅನ್ನು ಇಂಧನ ಸಚಿವ ವಿ. ಸುನೀಲ್ ಕುಮಾರ್ ಅವರು 75 ಯೂನಿಟ್‌ಗೆ ಹೆಚ್ಚಿಸಿರುವುದು ಬಹಳ ಸಂತಸದ ವಿಚಾರ. ಇದಕ್ಕಾಗಿ ಸಚಿವರನ್ನು ಅಭಿನಂದಿಸುವುದಾಗಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.