Wednesday, July 6, 2022
spot_img
Homeರಾಜ್ಯಫ್ಯಾಟ್ ಸರ್ಜರಿ ವೇಳೆ ಕನ್ನಡ ಕಿರುತೆರೆ ನಟಿ ಚೇತನಾ ರಾಜ್ ಸಾವು

ಫ್ಯಾಟ್ ಸರ್ಜರಿ ವೇಳೆ ಕನ್ನಡ ಕಿರುತೆರೆ ನಟಿ ಚೇತನಾ ರಾಜ್ ಸಾವು

ಬೆಂಗಳೂರು : ಪೋಷಕರ ಒಪ್ಪಿಗೆ ಇಲ್ಲದೆ ಫ್ಯಾಟ್ ಸರ್ಜರಿಗೆ ಒಳಗಾಗಿದ್ದ ನಟಿ ಚೇತನಾ ರಾಜ್ (22 ವರ್ಷ) ಅವರು ನಿಧನರಾಗಿದ್ದಾರೆ. ಫ್ಯಾಟ್ ಸರ್ಜರಿ ವೇಳೆ ಶ್ವಾಸಕೋಶದಲ್ಲಿ ನೀರು ತುಂಬಿತ್ತು ಎನ್ನಲಾಗಿದೆ. ವೈದ್ಯರು ಹೆಚ್ಚಿನ ಚಿಕಿತ್ಸೆ ನೀಡಲು ಪ್ರಯತ್ನಪಟ್ಟರೂ ಕೂಡ ಚೇತನಾರನ್ನು ಬದುಕಿಸಲು ಸಾಧ್ಯವಾಗಿಲ್ಲ. ಮೇ 16 ರಂದು ಫ್ಯಾಟ್ ಸರ್ಜರಿ ನಡೆದಿತ್ತು. ಈ ವಿಚಾರ ಗೊತ್ತಾಗಿ ಪೋಷಕರು ಆಸ್ಪತ್ರೆಗೆ ಬಂದಿದ್ದರು. ಶಸ್ತ್ರಚಿಕಿತ್ಸೆ ವೇಳೆ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡು ಚೇತನಾ ಸ್ಥಿತಿ ಗಂಭೀರವಾಗಿತ್ತು.
ಮನೆಯಲ್ಲಿ ತಿಳಿಸದೆ ಚೇತನಾ ಫ್ಯಾಟ್ ಸರ್ಜರಿ ಮಾಡಿಕೊಂಡಿದ್ದಾರೆ. ನನ್ನ ಮಗಳು ಆರೋಗ್ಯವಾಗಿದ್ದಳು, ಫ್ಯಾಟ್ ತೆಗೆತೀನಿ ಅಂತ ಹೇಳಿ ಈ ರೀತಿ ಮಾಡಿದ್ದಾರೆ. ಆಸ್ಪತ್ರೆಯಲ್ಲಿ ನನ್ನ ಮಗಳ ಜೊತೆ ಸ್ನೇಹಿತರಿದ್ದರು. ದೊಡ್ಡ ನಟಿಯಾಗಬೇಕು ಎಂದು ಮಗಳು ತುಂಬ ಕನಸು ಇಟ್ಟುಕೊಂಡಿದ್ದಳು. ಮುಂಜಾಗ್ರತೆ ಕ್ರಮ ಕೈಗೊಳ್ಳದೆ ಈ ರೀತಿ ಆಗಿದೆ. ನನ್ನ ಮಗಳಿಗೆ ಯಾವುದೇ ಕಾಯಿಲೆ ಇರಲಿಲ್ಲ. ದಪ್ಪ ಇದ್ದೀಯಾ ಅಂತ ಯಾರೋ ಹೇಳಿದರು ಅಂತ ಮಗಳು ಸರ್ಜರಿಗೆ ಒಳಗಾಗಿದ್ದಾಳೆ. ವೈದ್ಯರು ಮನೆಯ ಅನುಮತಿ ಇಲ್ಲದೆ ಸರ್ಜರಿ ಮಾಡಿದರು ಎಂದು ಚೇತನಾ ತಂದೆ ವರದರಾಜ್ ರಾಜಾಜಿನಗರದ ಬಳಿ ಇರುವ ಶೆಟ್ಟಿ ಕಾಸ್ಮೆಟಿಕ್ ಕ್ಲಿನಿಕ್ ವಿರುದ್ಧ ಆರೋಪ ಮಾಡಿದ್ದಾರೆ. ತಾಯಿ ಮುನಿಲಕ್ಷ್ಮೀ ಆಕ್ರಂದನ ಮುಗಿಲುಮುಟ್ಟಿದೆ.
ಆಸ್ಪತ್ರೆಯಲ್ಲಿ ಅಗತ್ಯ ಸಲಕರಣೆಗಳಿಲ್ಲ, ಪೋಷಕರ ಒಪ್ಪಿಗೆ ಇಲ್ಲದೆ ಫ್ಯಾಟ್ ಸರ್ಜರಿ ಮಾಡಿದರು ಎಂದು ಅಪ್ಪ ವರದರಾಜ್ ಆರೋಪ ಮಾಡಿದ್ದಾರೆ. ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ವೈದ್ಯರ ವಿರುದ್ಧ ಪೊಲೀಸರಿಗೆ ದೂರು ನೀಡಲು ಪೋಷಕರು ನಿರ್ಧರಿಸಿದ್ದಾರೆ.
‘ಗೀತಾ’, ‘ದೊರೆಸಾನಿ’ ಧಾರಾವಾಹಿಯಲ್ಲಿ ಚೇತನಾ ರಾಜ್ ನಟಿಸಿದ್ದರು. ಇನ್ನೂ ಬಿಡುಗಡೆಯಾಗದ ‘ಆವಾಮಯಾಮಿ’ ಸಿನಿಮಾದಲ್ಲಿಯೂ ಚೇತನಾ ಬಣ್ಣ ಹಚ್ಚಿದ್ದರು











---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!