ಕಾರ್ಕಳ : ಅಪಾರ್ಟ್ಮೆಂಟ್ ಖರೀದಿದಾರರಲ್ಲಿ ಹಣ ತೆಗೆದುಕೊಂಡು ಕ್ಲಪ್ತ ಸಮಯದಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸದೇ ವಂಚಿಸಿರುವುದಾಗಿ ಮಹಿಳೆಯೊಬ್ಬರು ಕಾರ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸುರೇಶ್ ಸುಂದರ ಶೆಟ್ಟಿ, ಭಾಸ್ಕರ ಬೈರಿ ಶೆಟ್ಟಿ, ಬಾಲು ಬಂದುಭಿಸೆ, ಸತೀಶ್ ಸುಂದರ್ ಶೆಟ್ಟಿ, ರಮೇಶ್ ಕುಮಾರ್ ಅವರು ಪಾಲುದಾರಿಕೆಯ ಗೋಮಾಲ್ ಸಮೃದ್ಧಿ ಹಿಲ್ಸ್ ನ ಅಪಾರ್ಟ್ಮೆಂಟ್ ನಲ್ಲಿ ಉಷಾ ಜಯಂತ್ ಅವರು 4 ಫ್ಲಾಟ್ ಅನ್ನು 72 ಲಕ್ಷ ರೂ. ನೀಡಿ ಬುಕ್ ಮಾಡಿರುತ್ತಾರೆ. 2012 ಜ. 20ರಂದು ಉಷಾ ಜಯಂತ್ ಅವರ ಗಂಡ ಜಯಂತ್ ಅವರು 3 ಫ್ಲಾಟ್ ಖರೀದಿಸಲು ಕರಾರು ಮಾಡಿಕೊಂಡಿದ್ದಾರೆ. ಸಮೃದ್ಧಿ ಹಿಲ್ಸ್ ನ 2 ಅಂಗಡಿ ಕೋಣೆಗಳನ್ನು ಖರೀದಿಸಲು ಹಂತ ಹಂತವಾಗಿ 58 ಲಕ್ಷ ರೂ. ಪಾವತಿಸಿದ್ದಾರೆ. 2016ರ ಒಳಗಾಗಿ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸುವುದಾಗಿ ಹೇಳಿದ್ದು, ಕ್ಲಪ್ತ ಸಮಯಕ್ಕೆ ಕಾಮಗಾರಿ ಪೂರ್ತಿಗೊಳಿಸದೇ ವಂಚಿಸಿರುವುದಾಗಿ ಉಷಾ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಕಾಮಗಾರಿ ಪೂರ್ಣಗೊಳಿಸದೇ ಅಪಾರ್ಟ್ಮೆಂಟ್ ಗ್ರಾಹಕರಿಗೆ ವಂಚನೆ
Recent Comments
ಕಗ್ಗದ ಸಂದೇಶ
on