ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ : ಹೊಟೇಲ್‌ ಜೈನ್‌ ಮುಂಭಾಗದಿಂದ ಎಂಪಿಎಂ ಕಾಲೇಜುವರೆಗೆ ಜಾಗೃತಿ ಜಾಥಾ

ಕಾರ್ಕಳ : ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಪ್ರಯುಕ್ತ ಜಿ.ಪಂ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆ‍ಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಮಂಜುನಾಥ ಪೈ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಮೇ 16ರಂದು ಡೆಂಗ್ಯೂ ಕುರಿತು ಜಾಗೃತಿ ಜಾಥಾ ನಡೆಯಿತು. ಸರ್ವಜ್ಞ ವೃತ್ತ ಬಳಿಯ ಹೊಟೇಲ್‌ ಜೈನ್‌ ಮುಂಭಾಗದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಕೃಷ್ಣಾನಂದ ಶೆಟ್ಟಿ ಜಾಥಾಕ್ಕೆ ಚಾಲನೆ ನೀಡಿದರು. ಎಂಪಿಎಂ ವಿದ್ಯಾರ್ಥಿಗಳು ಡೆಂಗ್ಯೂ, ಚಿಕುನ್‌ಗುನ್ಯಾ, ಮಲೇರಿಯಾ ರೋಗದ ಕುರಿತು, ರೋಗ ಹರಡುವ ವಿಧಾನ, ತಡೆಗಟ್ಟುವ ಕ್ರಮ, ವಹಿಸಬೇಕಾದ ಮುನ್ನೆಚ್ಚರಿಕೆ ಫಲಕಗಳನ್ನು ಪ್ರದರ್ಶಿಸುತ್ತ ಎಂಪಿಎಂ ಕಾಲೇಜುವರೆಗೆ ಜಾಥಾ ನಡೆಸಿದರು.





























































































































































































































error: Content is protected !!
Scroll to Top