Wednesday, July 6, 2022
spot_img
Homeಸುದ್ದಿಹೆಬ್ರಿ ಸಾಹಿತ್ಯ ಸಮ್ಮೇಳನ

ಹೆಬ್ರಿ ಸಾಹಿತ್ಯ ಸಮ್ಮೇಳನ

ಸಾಹಿತ್ಯದ ಮೂಲಕ ಕನ್ನಡ ಉಳಿಸಿ ಬೆಳೆಸುವ ಕಾರ್ಯವಾಗಲಿ – ಬೆಳ್ವೆ ಗಣೇಶ್‌ ಕಿಣಿ

ಹೆಬ್ರಿ : ಕನ್ನಡ ನೆಲ ಜಲ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಮಹತ್ವದ ಕಾರ್ಯ ಸಾಹಿತ್ಯದ ಮೂಲಕ ನಡೆಯಬೇಕಿದೆ. ಅಂತಹ ಕೆಲಸಗಳು ಹೊಸಸಂಜೆ ಪ್ರಕಾಶನದ ಮೂಲಕ ದೇವರಾಯ ಪ್ರಭು ನಿರಂತರವಾಗಿ ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಸಾಹಿತ್ಯ ಪೋಷಕರಾದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಟ್ರಸ್ಟಿ ಬೆಳ್ವೆ ಗಣೇಶ್‌ ಕಿಣಿ ಹೇಳಿದರು.
ಅವರು ಭಾನುವಾರ ಹೆಬ್ರಿ ಅನಂತ ಪದ್ಮನಾಭ ಸನ್ನಿಧಿಯಲ್ಲಿ ಹೊಸಸಂಜೆ ಪ್ರಕಾಶನ ಆಯೋಜನೆಯಲ್ಲಿ ನಡೆದ ಹೆಬ್ರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ – ಸೌರಭ 2022 ಉದ್ಘಾಟಿಸಿ ಮಾತನಾಡಿದರು.
ಸಾಹಿತ್ಯ ಸೇವೆಗೆ ಯಾರ ಹಂಗೂ ಬೇಡ, ಅದು ಸೇವೆಯಾಗಿ ನಡೆಯಬೇಕು. ಸಾಹಿತ್ಯದ ಸೇವೆಯನ್ನು ಯಾರೂ ಕೂಡ ಮಾಡಬಹುದು ಎಂದು ತೋರಿಸಿಕೊಟ್ಟು ಅಂತಹ ಕನ್ನಡಮ್ಮನ ಸೇವೆ ಹೆಬ್ರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಮೂಲಕ ನಡೆಯುತ್ತಿದೆ ಎಂದು ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ನವೀನ್‌ಕೆ. ಅಡ್ಯಂತಾಯ ಹೇಳಿದರು.

ಸನ್ಮಾನ
ವಿವಿಧ ಕ್ಷೇತ್ರಗಳ ಸಾಧಕರಾದ ಶಿವಪುರ ಮಂಜುನಾಥ ಹೆಬ್ಬಾರ್‌( ಮಾಧ್ಯಮ), ಸೀತಾನದಿ ಸೌಖ್ಯ ಯೋಗ ಟ್ರಸ್ಟ್‌ಹೆಬ್ರಿ ( ಯೋಗ ), ಎಸ್. ರಾಜು ಶೇರಿಗಾರ್‌( ಶಿಕ್ಷಣ), ಎಚ್. ದಿನಕರ ಪ್ರಭು (ಆರೋಗ್ಯ), ಎಚ್. ಸದಾಶಿವ ಪ್ರಭು ( ಸಮಾಜಸೇವೆ), ವಸಂತ ಶೆಟ್ಟಿ ( ಯಕ್ಷಗಾನ), ವಸಂತ ಹೊಳ್ಳ ( ಸಾಹಿತ್ಯ), ಚಂದ್ರ ಆಚಾರ್‌( ಉದ್ಯಮ), ಪ್ರೀತಮ್‌ ದೇವಾಡಿಗ ( ಯುವ ಪ್ರತಿಭೆ) ಶ್ರೀಕಾಂತ್‌ಆಚಾರ್ಯ ( ಕೃಷಿ) ಮತ್ತು ನಾಗರಾಜ್‌ (ಸರ್ಕಾರಿ ಸೇವೆ) ಇವರಿಗೆ ಸಮ್ಮೇಳನದಲ್ಲಿ ಗೌರವ ಸಮರ್ಪಣೆ ಮಾಡಲಾಯಿತು.

ಕವಯಿತ್ರಿಯಾಗಿರುವ ಉಪನ್ಯಾಸಕಿ ಶ್ರೀ ಮುದ್ರಾಡಿ ಅಧ್ಯಕ್ಷತೆಯಲ್ಲಿ ಸೌರಭ – ಕವಿಗೋಷ್ಠಿ ನಡೆಯಿತು.
ಶ್ರೀಕರ ಭಾರದ್ವಾಜ್‌ ಕಬ್ಬಿನಾಲೆ, ಅರುಣಾ ಹೆಬ್ರಿ, ವಸಂತ ಹೊಳ್ಳ ಹೆಬ್ರಿ, ಹೆಬ್ರಿ ಮಾಲತಿ ಜಿ. ಪೈ ಕಾರ್ಕಳ, ಡಾ. ಸುಮತಿ ಪಿ., ಚೈತ್ರ ಕಬ್ಬಿನಾಲೆ, ಅಶ್ವಿನಿ ಕೆ, ಸುಕುಮಾರ್‌ ಮುನಿಯಾಲ್‌ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿದರು.
ಮಂಗಳೂರು ಮೆಸ್ಕಾಂ ನಿರ್ದೇಶಕ ಎಂ. ದಿನೇಶ್‌ ಪೈ ಮುನಿಯಾಲು, ಮುನಿಯಾಲು ಲಯನ್ಸ್‌ ಕ್ಲಬ್‌ನ ಹರ್ಷ ಶೆಟ್ಟಿ, ಕುಚ್ಚೂರು ಹೆರ್ಗ ವಿಠ್ಠಲ ಶೆಟ್ಟಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಸ್ನೇಹಲತಾ ಟಿ.ಜಿ., ವರಂಗ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಹೆಬ್ಬಾರ್‌, ಕುಚ್ಚೂರು ಗ್ರಾಮ ಪಂಚಾಯತ್‌ ಅಧ್ಯಕ್ಷೆ ರೇವತಿ ಶೆಟ್ಟಿ, ಹೆಬ್ರಿ ರಾಮ ಮಂದಿರದ ಕಾರ್ಯದರ್ಶಿ ಎಚ್. ನರೇಂದ್ರ ನಾಯಕ್, ‌ಸಮಾಜ ಸೇವಕರು ಸಾಹಿತ್ಯ ಪೋಷಕ ಬೈಕಾಡಿ ಮಂಜುನಾಥ ರಾವ್‌ ಶಿವಪುರ, ಕುಚ್ಚೂರು ಕುಡಿಬೈಲ್‌ ಶಾಂತಿನಿಕೇತನ ಯುವ ವೃಂದದ ಅಧ್ಯಕ್ಷ ರಾಜೇಶ್‌ ಉಪಸ್ಥಿತರಿರುವರು.
ಹೆಬ್ರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ರೂವಾರಿ ಕಾರ್ಕಳ ಹೊಸಸಂಜೆ ಪ್ರಕಾಶನದ ಆರ್. ದೇವರಾಯ ಪ್ರಭು ಪ್ರಾಸ್ತಾವಿಕ ಮಾತನಾಡಿ ಹೆಬ್ರಿಯಲ್ಲಿ ಮತ್ತೊಮ್ಮೆ ಸೌರಭ ಸಾಹಿತ್ಯ ಸಾಮ್ಮೇಳನ ನಡೆಸುವುದಾಗಿ ತಿಳಿಸಿದರು.
ಬಲ್ಲಾಡಿ ಚಂದ್ರಶೇಖರ ಭಟ್‌ ನಿರೂಪಿಸಿ, ಅಕ್ಷಿತಾ ಕೆ. ಶೆಟ್ಟಿ ವಂದಿಸಿದರು.











---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!