ಉಡುಪಿ : ಶ್ರೀಕೃಷ್ಣ ಮಠಕ್ಕೆ ಆಗಮಿಸಿದ ಮಹಿಳೆಯೊಬ್ಬರ ಬ್ಯಾಗ್ ನಲ್ಲಿದ್ದ ಚಿನ್ನಾಭರಣ ಕಳುವಾದ ಘಟನೆ ಮೇ. 13ರಂದು ನಡೆದಿದೆ.
ಬೆಂಗಳೂರಿನ ಚಿಕ್ಕನಹಳ್ಳಿಯ ಷಣ್ಮುಗಂ ಅವರು ಕುಟುಂಬ ಸಮೇತ ಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು. ಕೃಷ್ಣ ಮಠದ ವಸಂತ ಮಂಟಪದ ಬಳಿ ತೊಟ್ಟಿಲು ಸೇವೆ ನಡೆಯುತ್ತಿದ್ದು, ದೇವರ ಆರತಿ ಪಡೆಯುವ ಸಮಯದಲ್ಲಿ ಖದೀಮರು ಷಣ್ಮುಗಂ ಅವರ ಹೆಂಡತಿಯ ವ್ಯಾನಿಟೀ ಬ್ಯಾಗ್ನಲ್ಲಿದ್ದ ಚಿನ್ನಾಭರಣಗಳ ಬಾಕ್ಸ್ ಕಳವುಗೈದಿದ್ದಾರೆ.
ಬಾಕ್ಸ್ನಲ್ಲಿದ್ದ 58 ಗ್ರಾಂ ತಾಕದ 2 ಬಳೆಗಳು, 16 ಗ್ರಾಂ ತೂಕದ 2 ಕಿವಿಯೋಲೆ, 20 ಗ್ರಾಂ ತೂಕದ ಪೆಂಡೆಂಟ್ ಇರುವ ಚಿನ್ನದ ಸರ, 13 ಗ್ರಾಂ ತೂಕದ ಮಗುವಿನ ಬಳೆ, 40 ಗ್ರಾಂ ತೂಕದ ದೊಡ್ಡ ಚಿನ್ನದ ಸರ ಒಟ್ಟು 155 ಗ್ರಾಂ ತೂಕದ, ಅಂದಾಜು 6,30,000 ರೂ. ಮೌಲ್ಯದ ಸೊತ್ತುಗಳು ಕಳುವಾಗಿದೆ.
ಉಡುಪಿ : ಶ್ರೀ ಕೃಷ್ಣಮಠದಲ್ಲಿ ಮಹಿಳೆಯ ಚಿನ್ನಾಭರಣ ಕಳವು
Recent Comments
ಕಗ್ಗದ ಸಂದೇಶ
on