ಸಿಡ್ನಿ : ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಸ್ಫೋಟಕ ಆಲ್ರೌಂಡರ್ ಆಂಡ್ರ್ಯೂ ಸೈಮಂಡ್ಸ್ (46) ಅವರು ಮೇ. 14ರಂದು ನಡೆದ ಭೀಕರ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಶನಿವಾರ ರಾತ್ರಿ ಕ್ವೀನ್ಸ್ಲ್ಯಾಂಡ್ನ ಟೌನ್ಸ್ವಿಲ್ಲೆ ಹೊರವಲಯದಲ್ಲಿ ಮಧ್ಯರಾತ್ರಿ 11ರ ಸುಮಾರಿಗೆ ಹಾರ್ವೇ ರೇಂಜ್ ರಸ್ತೆಯಲ್ಲಿ ಸೈಮಂಡ್ಸ್ ಕಾರು ಚಲಾಯಿಸುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಕಾರಿನಲ್ಲಿ ಸೈಮಂಡ್ಸ್ ಒಬ್ಬರೇ ಇದ್ದು, ಅಲೈಸ್ ರಿವರ್ ಬ್ರಿಡ್ಜ್ ಸಮೀಪ ನಿಯಂತ್ರಣ ತಪ್ಪಿದ ಕಾರು ರಸ್ತೆಯಿಂದ ಹೊರಗೆ ಸಂಚರಿಸಿ, ಪಲ್ಟಿಯಾಗಿದೆ. ತುರ್ತು ಸೇವಾ ತಂಡವು ಸೈಮಂಡ್ಸ್ ಅವರ ಜೀವ ಉಳಿಸಲು ಪ್ರಯತ್ನ ನಡೆಸಿದರೂ ಸಫಲವಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸೈಮಂಡ್ಸ್ 26 ಟೆಸ್ಟ್, 198 ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದು, 1998ರಿಂದ 2009 ನಡುವೆ ಒಟ್ಟು 198 ಏಕದಿನ, 26 ಟೆಸ್ಟ್ ಹಾಗೂ 14 ಟಿ-20 ಪಂದ್ಯಗಳಲ್ಲಿ ಸೈಮಂಡ್ಸ್ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಿದ್ದಾರೆ. 2003 ಮತ್ತು 2007ರ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಕಾರು ಅಪಘಾತದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜ ಆಂಡ್ರ್ಯೂ ಸೈಮಂಡ್ಸ್ ನಿಧನ
Recent Comments
ಕಗ್ಗದ ಸಂದೇಶ
on