ದಾವಣಗೆರೆ : ಕಾಂಗ್ರೆಸ್ನ ಕಾರ್ಯಕರ್ತರು, ನಾಯಕರು ಎಲ್ಲರೂ ಅನಾಥರಾಗಿದ್ದಾರೆ. ರಾಜ್ಯದ ಜನತೆ ಇಂದು ಕೇವಲ ಬಿಜೆಪಿ ಮತ್ತು ಮೋದಿಯವರ ಮೇಲೆ ನಂಬಿಕೆ ಇಟ್ಟಿದ್ದಾರೆ ಎಂದು ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.
ಮುಖ್ಯಮಂತ್ರಿಗಳು ರಾಜ್ಯಕ್ಕೆ ಒಳಿತಾಗುವ ನಿರ್ಧಾರಗಳನ್ನೇ ತೆಗೆದುಕೊಳ್ಳುತ್ತಾರೆ. ಕಳೆದ ಏಳು ತಿಂಗಳಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ದೂರದೃಷ್ಟಿ ಇರುವ ನಾಯಕರಿಗೆ ತೆಗೆದುಕೊಳ್ಳಬೇಕಾದ ನಿರ್ಧಾರಗಳ ಬಗ್ಗೆ ಅರಿವಿರುತ್ತದೆ. ಸಚಿವ ಸ್ಥಾನದ ವಿಚಾರದಲ್ಲಿ ಪಕ್ಷ ಯಾವ ನಿರ್ಣಯ ತೆಗೆದುಕೊಳ್ಳುತ್ತದೆಯೋ ಅದಕ್ಕೆ ಪಕ್ಷದವರೆಲ್ಲಾ ಬದ್ಧರಾಗಿರುತ್ತೇವೆ. ಬೇರೆ ಯಾವ ವಿಚಾರಗಳ ಪ್ರಸ್ತಾಪವೂ ಇಲ್ಲ ಎಂದರು.
ಸಚಿವ ಸ್ಥಾನಕ್ಕೆ 60,100 ಕೋಟಿ ರೂ. ನೀಡುತ್ತಿದ್ದಾರೆಂಬ ಹೇಳಿಕೆಗೆ ಪ್ರತಿಕ್ರಯಿಸಿದ ಅವರು, ಪಕ್ಷ ನಮಗೆ ಕೊಟ್ಟಿದೆ ಬದಲಾಗಿ ನಾವು ಪಕ್ಷಕ್ಕೆ ಏನೂ ಕೊಟ್ಟಿಲ್ಲ. ನಮ್ಮಲ್ಲಿ ವಿಚಾರಕ್ಕೆ ಆದ್ಯತೆಯೇ ಹೊರತು ಹಣಕ್ಕೆ ಅಲ್ಲ ಎಂದು ಹೇಳಿದರು.
ಪಕ್ಷದ ನಿರ್ಣಯಕ್ಕೆ ಬದ್ಧ : ಸಚಿವ ಸುನೀಲ್
Recent Comments
ಕಗ್ಗದ ಸಂದೇಶ
on