Thursday, May 26, 2022
spot_img
Homeರಾಜ್ಯಚುನಾವಣೆಗೆ ಮುನ್ನ ಮಂಗಳೂರಿನಲ್ಲಿ ಶಾಸಕರ ಕ್ರಿಕೆಟ್ ಫೈಟ್

ಚುನಾವಣೆಗೆ ಮುನ್ನ ಮಂಗಳೂರಿನಲ್ಲಿ ಶಾಸಕರ ಕ್ರಿಕೆಟ್ ಫೈಟ್

ಮಂಗಳೂರು : ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಬಗ್ಗೆ ಈಗಲೇ ಚರ್ಚೆ ಆರಂಭವಾಗಿದ್ದು, ಪಕ್ಷಾಂತರವೂ ಶುರುವಾಗಿದೆ. ಇದಕ್ಕೆ ಮುನ್ನವೇ ದ. ಕ. ಜಿಲ್ಲೆಯ ಶಾಸಕರು ಬಿಗ್‌ ಫೈಟ್‌ಗೆ ಇಳಿದಿದ್ದಾರೆ. ಆದರೆ ಇದು ಚುನಾವಣೆಯಲ್ಲ. ಎಂಎಲ್‌ಎ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ ಪಂದ್ಯಾವಳಿ.
ಸಾಮಾಜಿಕ ಕಳಕಳಿಯನ್ನಿಟ್ಟುಕೊಂಡು ಆರಂಭವಾದ ಸಂಕಲ್ಪ ಫೌಂಡೇಶನ್‌ ಈ ವಿಭಿನ್ನ ಪ್ರಯತ್ನಕ್ಕೆ ಮುದಾಗಿದ್ದು, ಮೇ 28, 29ರಂದು ಅಡ್ಯಾರ್‌ ಸಹ್ಯಾದ್ರಿ ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದೆ.
ಡಾ. ಭರತ್‌ ಶೆಟ್ಟಿ ನೇತೃತ್ವದ ಉತ್ತರ ತಂಡ, ಡಿ. ವೇದವ್ಯಾಸ ಕಾಮತ್‌ ನೇತೃತ್ವದ ದಕ್ಷಿಣ ತಂಡ, ಯು.ಟಿ. ಖಾದರ್‌ ನೇತೃತ್ವದ ಮಂಗಳೂರು ತಂಡ, ಹರೀಶ್‌ ಪೂಂಜ ನೇತೃತ್ವದ ಬೆಳ್ತಂಗಡಿ ತಂಡ, ಅಂಗಾರ ನೇತೃತ್ವದ ಸುಳ್ಯ ತಂಡ, ಉಮಾನಾಥ್‌ ಕೋಟ್ಯಾನ್‌ ನೇತೃತ್ವದ ಮೂಡುಬಿದಿರೆ ತಂಡ, ಸಂಜೀವ ಮಠಂದೂರು ನೇತೃತ್ವದ ಪುತ್ತೂರು ತಂಡಗಳ ಮಧ್ಯೆ ಹಣಾಹಣೆ ನಡೆಯಲಿದೆ. ಈ ತಂಡಗಳ ಹೆಸರು ಶೀಘ್ರದಲ್ಲೇ ಪ್ರಕಟವಾಗಲಿದೆ.
8 ಓವರ್‌ಗಳ ಓವರ್‌ ಆರ್ಮ್‌ ಲೀಗ್‌ ಪಂದ್ಯಾವಳಿ ಇದ್ದಾಗಿದ್ದು, ಪಾಯಿಂಟ್‌ ಆಧಾರದಲ್ಲಿ ಕ್ವಾರ್ಟರ್‌ ಫೈನಲ್‌, ಸೆಮಿಫೈನಲ್‌, ಫೈನಲ್‌ ನಿರ್ಧಾರವಾಗಲಿದೆ. ಆಯಾ ತಂಡದಲ್ಲಿ ಆಡುವ ಆಟಗಾರ ಸಂಬಂಧಪಟ್ಟ ವಿಧಾನಸಭೆ ಕ್ಷೇತ್ರದ ಸದಸ್ಯನಾಗಿರಬೇಕು. ಯಾವುದೇ ಕಾರಣಕ್ಕೂ ಬೇರೆ ವಿಧಾನಸಭೆ ಕ್ಷೇತ್ರದ ಆಟಗಾರನನ್ನು ಆಡಿಸುವಂತಿಲ್ಲ. ಇದಕ್ಕಾಗಿ ವೋಟರ್‌ ಐಡಿ ಅಥವಾ ಆಧಾರ್‌ ಕಾರ್ಡ್‌ ದಾಖಲೆ ಹಾಜರುಪಡಿಸಬೇಕು. ತಂಡಗಳಿಗೆ ಯಾವುದೇ ನೋಂದಣಿ ಶುಲ್ಕವಿಲ್ಲ.
ಫೈನಲ್‌ನಲ್ಲಿ ವಿಜೇತ ತಂಡಕ್ಕೆ 1 ಲಕ್ಷ ರೂ. ಬಹುಮಾನ ಮತ್ತು ಪ್ರಶಸ್ತಿ, ರನ್ನರ್ಸ್ ಅಪ್‌ ತಂಡಕ್ಕೆ 50 ಸಾವಿರ ರೂ. ಮತ್ತು ಪ್ರಶಸ್ತಿ ಸಿಗಲಿದೆ. ಸರಣಿ ಶ್ರೇಷ್ಠ, ಬೆಸ್ಟ್‌ ಬ್ಯಾಟ್ಸ್‌ಮನ್‌, ಬೆಸ್ಟ್‌ ಬೌಲರ್‌ ಪ್ರಶಸ್ತಿಗಳು ಹಾಗೂ ಪ್ರತಿ ಪಂದ್ಯದಲ್ಲೂ ವಿಶೇಷ ಬಹುಮಾನ ನೀಡಲು ಸಂಘಟಕರು ತೀರ್ಮಾನಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!