ಮಧ್ಯಪ್ರದೇಶ : ಅಪರೂಪದ ಕೃಷ್ಣ ಮೃಗವನ್ನು ಬೇಟೆಯಾಡಲು ಬಂದ ಕಿಡಿಗೇಡಿಗಳು ಮೂವರು ಪೊಲೀಸರನ್ನು ಗುಂಡಿಕ್ಕಿ ಕೊಂದ ಘಟನೆ ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ನಡೆದಿದೆ.
ಶನಿವಾರ ಮುಂಜಾನೆ ವೇಳೆ ಗುನಾ ಜಿಲ್ಲೆಯಲ್ಲಿ ಈ ದುಷ್ಕೃತ್ಯ ನಡೆದಿದ್ದು, ಗುನಾ ಜಿಲ್ಲೆಯ ನಿಷೇಧಿತ ಅರಣ್ಯ ಪ್ರದೇಶದಲ್ಲಿ ಕಿಡಿಗೇಡಿಗಳು ಕೃಷ್ಣ ಮೃಗದ ಬೇಟೆಗೆ ಬಂದಿರುವ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಪೊಲೀಸರು ಧಾವಿಸಿದಾಗ ಶಸ್ತ್ರಾಸ್ತ್ರಧಾರಿ ಆರೋಪಿಗಳು ಮತ್ತು ಪೊಲೀಸರ ತಂಡ ಮುಖಾಮುಖಿಯಾಗಿದೆ. ಈ ವೇಳೆ ಪೊಲೀಸರು ಆರೋಪಿಗಳನ್ನು ಹಿಡಿಯಲು ಮುಂದಾಗಿದ್ದು, ಆಗ ಪೊಲೀಸರ ಮೇಲೆ ಬೇಟೆಗಾರರು ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ ಸಬ್ಇನ್ಸ್ಪೆಕ್ಟರ್ ಸೇರಿದಂತೆ ಮೂವರು ಪೊಲೀಸ್ ಸಿಬ್ಬಂದಿ ಹುತಾತ್ಮರಾಗಿದ್ದಾರೆ.
ವನ್ಯಜೀವಿ ಕಳ್ಳ ಬೇಟೆಗಾರರ ಗುಂಡಿನ ದಾಳಿಗೆ ಬಲಿಯಾದ ಪೊಲೀಸರನ್ನು ರಾಜ್ಕುಮಾರ್ ಜಾಟವ್, ನೀರಜ್ ಭಾರ್ಗವ್ ಮತ್ತು ಸಂತ್ರಾಮ್ ಎಂದು ಗುರುತಿಸಲಾಗಿದ್ದು, ಆರೋಪಗಳ ಮೇಲೆ ಪ್ರತಿದಾಳಿಗೆ ಪೊಲೀಸರು ಮುಂದಾದರಾದರೂ ಕಿಡಿಗೇಡಿಗಳು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ ಎಂದು ಗುನಾ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್ ಮಿಶ್ರಾ ತಿಳಿಸಿದ್ದಾರೆ. ಘಟನೆಯಲ್ಲಿ ಪೊಲೀಸ್ ವಾಹನದ ಚಾಲಕ ಕೂಡ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಕೃಷ್ಣಮೃಗ ಬೇಟೆಗಾರರ ಗುಂಡಿನ ದಾಳಿಗೆ ಮಧ್ಯಪ್ರದೇಶದ ಮೂರು ಪೊಲೀಸರು ಬಲಿ
Recent Comments
ಕಗ್ಗದ ಸಂದೇಶ
on