ಹೆಬ್ರಿ : ಹೆಬ್ರಿ ತಾಲೂಕು ರಚನೆಯಾಗಿ 5 ವರ್ಷ ಸಂದರೂ ಇಲ್ಲಿವರೆಗೆ ಹೋಬಳಿ ರಚನೆಯಾಗಿಲ್ಲ, ಉಪನೋಂದಾವಣೆ ಕಚೇರಿಯು ತೆರೆದಿಲ್ಲ. ಹೀಗಾಗಿ ಜನತೆ ಅಲೆದಾಟವಿನ್ನೂ ನಿಂತಿಲ್ಲ. ಸಕಾಲದಲ್ಲಿ ಸರಕಾರಿ ಸೇವೆಗಳು ಲಭ್ಯವಾಗದೇ ತೊಂದರೆ ಅನುಭವಿಸುವಂತಾಗಿದೆ ಎಂದು ಪ್ರಗತಿಪರ ನಾಗರಿಕ ಸೇವಾ ಸಮಿತಿಯ ಅಧ್ಯಕ್ಷ ಕೆರೆಬೆಟ್ಟು ಸಂಜೀವ ಶೆಟ್ಟಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಅವರು ಮೇ 14ರಂದು ಹೆಬ್ರಿ ಅನಂತಪದ್ಮನಾಭ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಿ ಮಾತನಾಡಿ, 1 ತಿಂಗಳೊಳಗಾಗಿ ಹೆಬ್ರಿಯಲ್ಲಿ ಹೋಬಳಿ ಮತ್ತು ಉಪನೋಂದಣಿ ಕಚೇರಿ ಪ್ರಾರಂಭವಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಹೋರಾಟ ಸಮಿತಿ ಎಚ್. ಭಾಸ್ಕರ ಜೋಯಿಸ್, ಭಾರತೀಯ ಕಿಸಾನ್ ಸಂಘದ ಎಚ್. ರಾಜೀವ ಶೆಟ್ಟಿ , ಗುಳ್ಕಾಡು ಭಾಸ್ಕರ ಶೆಟ್ಟಿ, ಸ್ಥಳೀಯ ಮುಖಂಡರಾದ ಸಂಜೀವ ನಾಯ್ಕ ಉಪಸ್ಥಿತರಿದ್ದರು.
ಹೆಬ್ರಿಯಲ್ಲಿ ಹೋಬಳಿ – ಉಪನೋಂದಾವಣೆ ಕಚೇರಿ ತೆರೆಯಲು ಆಗ್ರಹ
Recent Comments
ಕಗ್ಗದ ಸಂದೇಶ
on