Thursday, May 26, 2022
spot_img
Homeವಿದೇಶರನ್ ವೇನಲ್ಲಿ ಧಗಧಗನೆ ಹೊತ್ತಿ ಉರಿದ ಟಿಬೆಟ್ ಏರ್‌ಲೈನ್ಸ್ ವಿಮಾನ - ಹಲವು ಪ್ರಯಾಣಿಕರಿಗೆ ಗಾಯ

ರನ್ ವೇನಲ್ಲಿ ಧಗಧಗನೆ ಹೊತ್ತಿ ಉರಿದ ಟಿಬೆಟ್ ಏರ್‌ಲೈನ್ಸ್ ವಿಮಾನ – ಹಲವು ಪ್ರಯಾಣಿಕರಿಗೆ ಗಾಯ

ಚಾಂಗ್‌ಗಿಂಗ್ : ಚೀನಾದ ವಿಮಾನ ನಿಲ್ದಾಣವೊಂದರಲ್ಲಿ ಟೇಕ್‌ ಆಫ್ ಆಗುವ ವೇಳೆ ರನ್‌ವೇನಲ್ಲಿ ಟಿಬೆಟ್ ಏರ್‌ಲೈನ್ಸ್ ವಿಮಾನವೊಂದಕ್ಕೆ ಬೆಂಕಿ ಹೊತ್ತಿಕೊಂಡು ಉರಿದು ಹೋಗಿದೆ. ಅದೃಷ್ಟವಶಾತ್ ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಹೊರಗೆ ಕರೆತರಲಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಈ ವಿಮಾನದಲ್ಲಿ 113 ಪ್ರಯಾಣಿಕರು ಮತ್ತು ಒಂಬತ್ತು ಸಿಬ್ಬಂದಿ ಇದ್ದರು. ವಿಮಾನವು ನೈಋತ್ಯ ಭಾಗದ ನಗರ ಚಾಂಗ್‌ಗಿಂಗ್‌ನಿಂದ ಟಿಬೆಟ್‌ನ ನ್ಯಿಂಗ್ಚಿ ನಗರಕ್ಕೆ ಹೊರಟಿತ್ತು. ಟೇಕ್ ಆಫ್‌ಗೂ ಮುನ್ನ ವಿಮಾನದಲ್ಲಿ ಏನೋ ಅಸಹಜತೆ ಕಂಡುಬಂತು. ಇದನ್ನು ಗಮನಿಸಿದ ಕೂಡಲೇ ಟೇಕ್ ಆಫ್ ಅನ್ನು ರದ್ದುಗೊಳಿಸಲಾಯಿತು. ಈ ವೇಳೆ ಜೆಟ್ ವಿಮಾನವು ರನ್‌ವೇನಲ್ಲಿ ಅಡ್ಡಾದಿಡ್ಡಿ ಓಡಾಡಿತು ಎಂದು ಕಂಪೆನಿ ಹೇಳಿಕೆಯಲ್ಲಿ ತಿಳಿಸಿದೆ.
ಹಾನಿಗೊಳಗಾದ ಜೆಟ್‌ನ ಒಂದು ಭಾಗದಿಂದ ಭಾರಿ ಪ್ರಮಾಣದ ಬೆಂಕಿಯ ಜ್ವಾಲೆಗಳು ಉರಿಯುತ್ತಿದ್ದು, ನೀರು ಬಳಸಿ ಬೆಂಕಿಯ ಜ್ವಾಲೆಗಳನ್ನು ನಿಯಂತ್ರಣಕ್ಕೆ ತರಲಾಯಿತು. ವಿಮಾನದ ಮುಂದಿನ ತುದಿ ಹಾಗೂ ಒಂದು ರೆಕ್ಕೆ ಭಾಗ ಸುಟ್ಟು ಕರಕಲಾಗಿದೆ.
ಸುಮಾರು 40 ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ವಿಮಾನ ನಿಲ್ದಾಣ ತಿಳಿಸಿದೆ. ಚಾಂಗ್‌ಗಿಂಗ್ ಜಿಯಾಂಗ್ಬೆಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ವಿಮಾನಗಳ ಕಾರ್ಯಾಚರಣೆ ಸಹಜ ಸ್ಥಿತಿಗೆ ಮರಳಿದೆ. ಘಟನೆಯ ಕಾರಣ ಪತ್ತೆಗೆ ತನಿಖೆ ನಡೆಸಲಾಗುತ್ತಿದೆ ಎಂದು ಏರ್‌ಪೋರ್ಟ್ ಹೇಳಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!