Sunday, July 3, 2022
spot_img
HomeUncategorizedಮೇ. 15 : ಸ್ವರಾಜ್‌ ಮೈದಾನದಲ್ಲಿ ಕುಲಾಲ ಟ್ರೋಫಿ ಕ್ರೀಡಾಕೂಟ

ಮೇ. 15 : ಸ್ವರಾಜ್‌ ಮೈದಾನದಲ್ಲಿ ಕುಲಾಲ ಟ್ರೋಫಿ ಕ್ರೀಡಾಕೂಟ

ಕಾರ್ಕಳ : ಕರ್ನಾಟಕ ರಾಜ್ಯ ಕುಲಾಲ/ ಕುಂಬಾರರ ಯುವ ವೇದಿಕೆ, ಕುಲಾಲ ಯುವ ವೇದಿಕೆ ಕಾರ್ಕಳ ಹಾಗೂ ಕುಲಾಲ ಮಹಿಳಾ ಘಟಕ ಇವುಗಳ ಜಂಟಿ ಆಶ್ರಯದಲ್ಲಿ, ಉಡುಪಿ ಜಿಲ್ಲಾ ಮಟ್ಟದ ಕುಲಾಲ ಸ್ವಜಾತಿ ಬಾಂಧವರ ಪುರುಷರ ವಾಲಿಬಾಲ್‌ ಹಾಗೂ ಮಹಿಳೆಯರ ತ್ರೋಬಾಲ್‌ ಪಂದ್ಯಾಟ ಕುಲಾಲ ಟ್ರೋಫಿ – 2022 ಮೇ. 15ರಂದು ಸ್ವರಾಜ್‌ ಮೈದಾನದಲ್ಲಿ ನಡೆಯಲಿದೆ.

ಉದ್ಘಾಟನೆ
ಅಂದು ಬೆಳಿಗ್ಗೆ 9 ಗಂಟೆಗೆ ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್‌ ಕುಮಾರ್‌ ಪಂದ್ಯಾಟ ಉದ್ಘಾಟಿಸಲಿರುವರು. ಕಾರ್ಕಳ ಕುಲಾಲ ಸಂಘದ ಅಧ್ಯಕ್ಷ ಭೋಜ ಕುಲಾಲ್‌ ಬೇಳಂಜೆ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ರಾಜ್ಯ ಕುಲಾಲ/ ಕುಂಬಾರರ ಯುವ ವೇದಿಕೆಯ ಸ್ಥಾಪಕ ಅಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್‌ ಉಳ್ತೂರು, ರಾಜ್ಯಾಧ್ಯಕ್ಷ ಗಂಗಾಧರ್‌ ಬಂಜನ್‌, ಗೌರವಾಧ್ಯಕ್ಷ ತೇಜಸ್ವಿರಾಜ್‌, ಜಿಲ್ಲಾ ಕುಲಾಲ/ಕುಂಬಾರರ ಯುವ ವೇದಿಕೆಯ ಜಿಲ್ಲಾಧ್ಯಕ್ಷ ದಿವಾಕರ್‌ ಎಂ. ಬಂಗೇರ, ಕುಂದಾಪುರ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್‌, ಮುಂಬೈ ಕುಲಾಲ್‌ ಸಂಘದ ಅಧ್ಯಕ್ಷ ದೇವದಾಸ್‌ ಕುಲಾಲ್‌, ಕಾರ್ಕಳ ಕುಂಭಶ್ರೀ ವಿ.ಸ. ಸಂಘದ ಅಧ್ಯಕ್ಷ ಕೃಷ್ಣ ಮೂಲ್ಯ, ಕಾರ್ಕಳ ಕುಲಾಲ ಯುವ ವೇದಿಕೆಯ ಅಧ್ಯಕ್ಷ ಉದಯ್‌ ಕುಲಾಲ್‌ ಹೆರ್ಮುಂಡೆ, ಪೆರ್ಡೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷ ಸಂತೋಷ್‌ ಕುಲಾಲ್‌, ಕಾರ್ಕಳ ಕುಲಾಲ್‌ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಕುಲಾಲ್‌, ಪೆರ್ಡೂರು ಕುಲಾಲ ಸಂಘದ ಅಧ್ಯಕ್ಷ ಐತು ಕುಲಾಲ್‌, ಕುಂದಾಪುರ ಕುಲಾಲ ಸಮಾಜ ಸುಧಾರಕ ಸಂಘದ ವಿಶ್ವನಾಥ ಕುಲಾಲ್‌, ಬ್ರಹ್ಮಾವರ ಕುಲಾಲ ಸಂಘದ ರಾಜೀವ ಕುಲಾಲ್‌, ಮೆಕ್ಕೆಕಟ್ಟು ಕುಲಾಲ ಸುಧಾಕರ ಸಂಘದ ಅಧ್ಯಕ್ಷ ಭಾಸ್ಕರ ಕುಲಾಲ್‌, ನಾನಿಲ್ತಾರು ಕುಲಾಲ ಸಂಘದ ಅಧ್ಯಕ್ಷ ಕುಶ ಆರ್‌. ಮೂಲ್ಯ, ಕಾಪು ವಲಯ ಕುಲಾಲ ಸಂಘದ ಅಧ್ಯಕ್ಷ ಸಂದೀಪ್ ಬಂಗೇರ,‌ ಹೊಸ್ಮಾರು ಕುಲಾಲ ಸಮಾಜ ಕಲ್ಯಾಣ ಸಂಘದ ಪ್ರಮೋದ್‌ ಕುಲಾಲ್‌, ಬೈರಂಪಳ್ಳಿ ಕುಲಾಲ ಸಂಘದ ಅಧ್ಯಕ್ಷ ವಾಸು ಕುಲಾಲ್‌, ಶಿವಪುರ ಕುಲಾಲ ಸಂಘದ ಅಧ್ಯಕ್ಷ ಜಗನ್ನಾಥ್‌ ಕುಲಾಲ್‌, ಬೋಳ ಕುಲಾಲ ಸಂಘದ ಅಧ್ಯಕ್ಷೆ ಸುಗಂಧಿ ಮೂಲ್ಯ, ಉಡುಪಿ ಜಿಲ್ಲಾ ಯುವ ವೇದಿಕೆಯ ಅಧ್ಯಕ್ಷರು ಉಪಸ್ಥಿತರಿರಲಿದ್ದಾರೆ.

ಉಡುಪಿ ಜಿಲ್ಲೆಯ 7 ತಾಲೂಕಿನ ಸ್ವಜಾತಿ ಕ್ರೀಡಾಪಟುಗಳಿಗೆ ಮಾತ್ರ ಅವಕಾಶವಿದ್ದು, ಹೆಚ್ಚಿನ ಮಾಹಿತಿಗಾಗಿ 9880197475 ಸಂಪರ್ಕಿಸಬಹುದಾಗಿದೆ.











---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!