ಪುಣೆ : ಐಪಿಎಲ್ – 2022ರ ಬಲಿಷ್ಟ ತಂಡಗಳಾದ ಲಖನೌ ಮತ್ತು ಗುಜರಾತ್ ಟೈಟನ್ಸ್ ತಂಡ ಮೇ. 10ರಂದು ಮುಖಾಮುಖಿಯಾಗಲಿದ್ದು, ಗೆಲ್ಲುವ ತಂಡ ಪ್ಲೇ ಆಫ್ಗೆ ಅರ್ಹತೆ ಪಡೆದುಕೊಳ್ಳಲಿದೆ.
ಅಗ್ರ ಸ್ಥಾನದಲ್ಲಿ ಕೆ.ಎಲ್. ರಾಹುಲ್ ನಾಯಕತ್ವದ ಲಖನೌ ಸೂಪರ್ ಜೈಂಟ್ಸ್ ತಂಡವಿದ್ದು ಗುಜರಾತ್ ಟೈಟಾನ್ಸ್ ಎರಡನೇ ಸ್ಥಾನದಲ್ಲಿದೆ. ಎರಡೂ ತಂಡಗಳೂ ಆಡಿದ ತಲಾ 11 ಪಂದ್ಯಗಳಲ್ಲಿ 8 ಪಂದ್ಯಗಳನ್ನು ಗೆದ್ದು 16 ಅಂಕಗಳನ್ನು ಪಡೆದುಕೊಂಡಿದೆ.
ನೆಟ್ಟಿಗರಲ್ಲಿ ಬಹಳಷ್ಟು ಕುತೂಹಲವನ್ನು ಮೂಡಿಸಿರುವ ಬಲಿಷ್ಟ ತಂಡಗಳ ಪಂದ್ಯ ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ಸಂಜೆ 7.30ಕ್ಕೆ ಪ್ರಾರಂಭಗೊಳ್ಳಲಿದೆ.
ಐಪಿಎಲ್ 2022 : ಲಖನೌ – ಗುಜರಾತ್ ಪ್ಲೇ ಆಫ್ ಫೈಟ್
Recent Comments
ಕಗ್ಗದ ಸಂದೇಶ
on