Saturday, May 21, 2022
spot_img
Homeಸ್ಥಳೀಯ ಸುದ್ದಿಸಿಡಿಲು ಆಘಾತದಿಂದ ಮೃತಪಟ್ಟ ಜಿಗೀಶ್‌ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ವಿತರಣೆ

ಸಿಡಿಲು ಆಘಾತದಿಂದ ಮೃತಪಟ್ಟ ಜಿಗೀಶ್‌ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ವಿತರಣೆ

ಕಾರ್ಕಳ : ಎ. 25ರಂದು ಸಿಡಿಲು ಆಘಾತದಿಂದ ಮೃತಪಟ್ಟಿರುವ ನೂರಾಳ್ ಬೆಟ್ಟು ಗ್ರಾಮದ ಜಾಣಮನೆ ಜಿಗೀಶ್‌ ಜೈನ್ ಅವರ ಮನೆಗೆ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಭೇಟಿ ನೀಡಿ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಡಿ ಸರಕಾರದ ಅನುದಾನ ರೂ. 5 ಲಕ್ಷದ ಚೆಕ್ ವಿತರಿಸಿ, ಮೃತರ ತಂದೆ – ತಾಯಿಯವರಿಗೆ ಸಾಂತ್ವನ ಹೇಳಿದರು.
ಈದು ಗ್ರಾ.ಪಂ. ಅಧ್ಯಕ್ಷೆ ಜಯಂತಿ, ತಹಶೀಲ್ದಾರ್‌ ಪ್ರದೀಪ್ ಕುರ್ಡೆಕರ್, ಕಾರ್ಕಳ ಗ್ರಾಮಾಂತರ ಠಾಣೆ ಎಸ್‌ಐ ತೇಜಸ್ವಿ, ಕಂದಾಯ ನಿರೀಕ್ಷಕ ಶಿವಪ್ರಸಾದ್, ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಪುರುಷೋತ್ತಮ ಎಚ್.‌, ಗ್ರಾಮಕರಣಿಕ ಬಾಲಕೃಷ್ಣ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!