Saturday, May 21, 2022
spot_img
Homeಸುದ್ದಿಐದು ವರ್ಷದ ಮಗುವಿನ ಅಂಗಾಂಗ ದಾನ - ಉಳಿಯಿತು ಎರಡು ಮಕ್ಕಳ ಜೀವ

ಐದು ವರ್ಷದ ಮಗುವಿನ ಅಂಗಾಂಗ ದಾನ – ಉಳಿಯಿತು ಎರಡು ಮಕ್ಕಳ ಜೀವ

ನವದೆಹಲಿ: ಐದು ವರ್ಷದ ಕಂದಮ್ಮ ತನ್ನ ಅಂಗಾಗಗಳನ್ನು ದಾನ ಮಾಡಿ ಎರಡು ಜೀವಗಳನ್ನು ಉಳಿಸುವ ಮೂಲಕ ಸಾರ್ಥಕತೆ ಮೆರೆದ ಘಟನೆ ಎ. 29ರಂದು ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ನಡೆದಿದೆ.
ನೊಯ್ಡಾದ ರೋಲಿ(5) ಅಂಗಾಗಳನ್ನು ದಾನ ಮಾಡಿದ ಬಾಲಕಿ. ಮನೆಯ ಹೊರಗಡೆ ಇದ್ದ ವೇಳೆ ಈಕೆಯ ತಲೆಗೆ ಗುಂಡು ತಗುಲಿದ್ದು, ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಆಕೆಯ ತಲೆಯ ಎರಡು ಮೂಳೆಗಳು ಮುರಿದು ಗಾಯದಿಂದಾಗಿ ರೋಲಿ ಕೋಮಾ ಸ್ಥಿತಿ ತಲುಪಿರುವುದಾಗಿ ತಿಳಿಸಿದರು. ನಂತರ ರೋಲಿಯನ್ನು ದೆಹಲಿಯ ಏಮ್ಸ್‌ಗೆ ದಾಖಲಿಸಿ ಎರಡು ದಿನಗಳ ಕಾಲ ಬಾಲಕಿಯನ್ನು ರಕ್ಷಿಸಲು ವೈದ್ಯರು ಶತಪ್ರತ್ನ ಮಾಡಿದ್ದರು. ಆದರೆ ಎ. 29ರಂದು ಆಕೆಯ ಮೆದುಳು ನಿಷ್ಕ್ರೀಯಗೊಂಡಿತು.ಬಳಿಕ ವೈದ್ಯರು ರೋಲಿಯ ಅಂಗಾಂಗ ದಾನದ ಪ್ರಕ್ರಿಯೆಯ ಬಗ್ಗೆ ವಿವರಿಸಿದಾಗ ಆರಂಭದಲ್ಲಿ ನಿರಾಕರಿಸಿದ ಪೋಷಕರು ನಂತರ ತಮ್ಮ ಮಗಳ ಅಂಗಾಂಗಗಳ ದಾನಕ್ಕೆ ಒಪ್ಪಿಕೊಂಡರು. ತಮ್ಮ ಮಗುವನ್ನು ಕಳೆದುಕೊಂಡ ನೋವನ್ನು ಬೇರೆ ಯಾವುದೇ ಕುಟುಂಬ ಅನುಭವಿಸಬಾರದು ಎಂದು ಅಂಗಾಂಗ ದಾನ ಮಾಡಲು ನಿರ್ಧರಿಸಿದ್ದೇವೆ ಎಂದು ರೋಲಿಯ ತಂದೆ ಹರಿನಾರಾಯಣ್ ತಿಳಿಸಿದ್ದಾರೆ.
ರೋಲಿಯ ಅಂಗಾಂಗ ದಾನದಿಂದಾಗಿ ಯಕೃತ್ತು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಇಬ್ಬರು ಮಕ್ಕಳು ಗುಣಮುಖರಾಗಿದ್ಧಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!