ಕಾರ್ಕಳ : ಮುಂಡ್ಲಿ ಜಲಾಶಯದಿಂದ ಕಾರ್ಕಳ ಪುರಸಭೆ ವ್ಯಾಪ್ತಿಗೆ ಕುಡಿಯುವ ನೀರು ಸರಬರಾಜಾಗುತ್ತಿರುವ ಪೈಪ್ ತೆಳ್ಳಾರು ಹಳೆ ಬ್ರಿಡ್ಜ್ನ ಬಳಿ ತೂತು ಆಗಿದ್ದು, ಪರಿಣಾಮ ನಿರಂತರವಾಗಿ ನೀರು ಪೋಲಾಗುತ್ತಿದೆ. ಎತ್ತರಕ್ಕೆ ನೀರು ಚಿಮ್ಮಿ ಹೊಸ ಬ್ರಿಡ್ಜ್ ನ ಮೇಲೆ ತೆರಳುತ್ತಿರುವ ದ್ವಿಚಕ್ರ ಸವಾರರಿಗೆ, ಪಾದಚಾರಿಗಳಿಗೆ ತಂಪೆರೆಯುವಂತಾಗಿದೆ. ಕಡು ಬೇಸಿಗೆಯಲ್ಲಿ ಈ ಪ್ರಮಾಣದಲ್ಲಿ ನೀರು ಹಾಗೂ ವಿದ್ಯುತ್ ವೃಥಾ ಪೋಲಾಗುತ್ತಿರುವ ಕುರಿತು ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದ್ದು, ಸಂಬಂಧಪಟ್ಟವರು ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಬೇಕಿದೆ.
Recent Comments
ಕಗ್ಗದ ಸಂದೇಶ
on