Thursday, May 26, 2022
spot_img
Homeಸುದ್ದಿಕಾರ್ಕಳ ತಾ. ಪಂ. ಸಾಮಾನ್ಯ ಸಭೆ

ಕಾರ್ಕಳ ತಾ. ಪಂ. ಸಾಮಾನ್ಯ ಸಭೆ

ಕಾರ್ಕಳ : ಕಾರ್ಕಳ ತಾ.ಪಂ. ಸಾಮಾನ್ಯ ಸಭೆ ಎ. 29 ರಂದು ನಡೆಯಿತು. ಶಿಕ್ಷಣ ಇಲಾಖಾ ಕಚೇರಿಗೆ 96 ಬ್ಯಾಟರಿಗಳ ಖರೀದಿಗೆ ದರಪಟ್ಟಿ ಅನುಮೋದನೆ, ತಾ. ಪಂ. ವೇತನ ಹಾಗೂ ವೇತನೇತರ ಆಯವ್ಯಯ ಅನುಮೋದನೆ, ಡಿ. 2021 ರಿಂದ ಮಾ. 2022 ರ ಲೆಕ್ಕಪತ್ರ ಅನುಮೋದನೆ, ಬಾಹ್ಯ ಮೂಲದಿಂದ ಹೊರಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ಆಯ್ಕೆ ಮಾಡಲು ಇ-ಟೆಂಡರ್‌ ಪ್ರಕ್ರಿಯೆಗೆ ಅನುಮೋದನೆ, ಕಾರ್ಕಳ ತಾಲೂಕಿನ 27 ಗ್ರಾ. ಪಂ.ಗಳ 2022-23ನೇ ಸಾಲಿನ ಆಯವ್ಯಯ ಅನುಮೋದನೆ ಮತ್ತು ಸ್ಥಳೀಯ ಯೋಜನಾ ಪ್ರದೇಶದ ಹೊರಗಡೆ ಇರುವ ಭೂಪರಿವರ್ತನಾ ಸ್ಥಳಗಳಲ್ಲಿನ ಏಕ/ಬಹು ವಿನ್ಯಾಸದ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಯಿತು. ತಾ.ಪಂ. ಆಡಳಿತಾಧಿಕಾರಿ ಪ್ರತಿಭಾ ಆರ್. ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಗುರುದತ್ತ್‌ ಸಭೆ ನಿರ್ವಹಿಸಿದರು. ಸಹಕಾಯ ಲೆಕ್ಕಾಧಿಕಾರಿ ನಿತಿನ್‌ ಕುಮಾರ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!