ನವದೆಹಲಿ: ಬೆಂಗಳೂರಿನ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿ. (ಎಚ್ಎಎಲ್), ತಾನು ತಯಾರಿಸುತ್ತಿರುವ ಎಂಕೆ-1 ಹಗುರ ಯುದ್ಧ ವಿಮಾನ (ಎಲ್ಸಿಎ) ಗಳ ಪರೀಕ್ಷೆಯನ್ನು ಆರಂಭ ಮಾಡಿದೆ. ಈ ಪರೀಕ್ಷೆ ಯಶಸ್ವಿಯಾದ ಬಳಿಕ ಈ ಹಗುರ ಯುದ್ಧ ವಿಮಾನಗಳನ್ನು ವಾಯುಪಡೆಗೆ ಸೇರ್ಪಡೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಂಸ್ಥೆಯು ಈ ಪ್ರಯೋಗವನ್ನು ಬೆಂಗಳೂರಿನ ಏರ್ಕ್ರಾಫ್ಟ್ ರಿಸರ್ಚ್ ಆಂಡ್ ಡಿಸೈನ್ ಸೆಂಟರ್ನಲ್ಲಿ ನಡೆಸುತ್ತಿದೆ. ಐಎಎಫ್ಗೆ ಈಗಾಗಲೇ ಎಲ್ಸಿಎ ಎಂಕೆ – 1 ಅನ್ನು ಸೇರ್ಪಡೆ ಮಾಡಲಾಗಿದೆ. ಆದರೂ ಅಗತ್ಯ ಯುದ್ಧ ಸಂದರ್ಭಗಳಲ್ಲಿ ವಾಯುಪಡೆಯ ಅನುಕೂಲಗಳಿಗೆ ಪೂರಕವಾಗಿ ಇದು ಕಾರ್ಯ ನಿರ್ವಹಿಸುವುದೋ, ಇಲ್ಲವೋ ಎಂಬುದರ ಬಗ್ಗೆ ಈ ಪರೀಕ್ಷೆಯ ಸಂದರ್ಭದಲ್ಲಿ ಪರಿಶೀಲನೆ ನಡೆಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Recent Comments
ಕಗ್ಗದ ಸಂದೇಶ
on