ಕಾರ್ಕಳ : ಆನೆಕೆರೆ ಶ್ರೀ ಕೃಷ್ಣ ಕ್ಷೇತ್ರದ ಪ್ರತಿಷ್ಠಾಪನೆಯ 14ನೇ ವರ್ಷದ ವರ್ಧಂತ್ಯುತ್ಸವ ಎ. 30ರಂದು ನಡೆಯಲಿದೆ. ಅಂದು ಆಶ್ಲೇಷಾ ಬಲಿ ಪೂಜೆ, ನಾಗದರ್ಶನ ಜರಗಲಿದೆ. ದಯಾನಂದ ಧರ್ಮದರ್ಶಿ ನಾಗಪಾತ್ರಿಯಾಗಿ ಸೇವೆ ಸಲ್ಲಿಸಲಿದ್ದಾರೆ. ಬನ್ನಂಜೆ ಶ್ರೀ ಕೇಶವ ತಂತ್ರಿಯಯವರ ನೇತೃತ್ವದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ಸದಾನಂದ ಶಾಂತಿ ಮತ್ತು ಬಳಗದವರಿಂದ ವೈದಿಕ ಕಾರ್ಯ ನೆರವೇರಲಿದೆ.
ಬೆಳಗ್ಗೆ ಗಂಟೆ 9 ಕ್ಕೆ ಪವಮಾನ ಹೋಮ, ಅನಂತರ ಆಶ್ಲೇಷಾ ಬಲಿ ಪೂಜೆ, ಪಂಚಾಮೃತ ಅಭಿಷೇಕ, ಪ್ರಧಾನ ದೇವರುಗಳಿಗೆ ಮಹಾಪೂಜೆ, ನಾಗದರ್ಶನ, ಪ್ರಸಾದ ವಿತರಣೆ, ಮಧ್ಯಾಹ್ನ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ಜರಗಲಿದೆ. ಉತ್ಸವದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕ್ಷೇತ್ರದ ಆಡಳಿತ ಮೊಕ್ತೇಸರ ಭಾಸ್ಕರ್ ಎಸ್. ಕೋಟ್ಯಾನ್ ವಿನಂತಿಸಿದ್ದಾರೆ.
