Thursday, May 26, 2022
spot_img
Homeವಿದೇಶನೈಸರ್ಗಿಕ ಅನಿಲ ಬಳಸಿ ರಷ್ಯಾ ಬ್ಲಾಕ್ ಮೇಲ್ : ಯುರೋಪಿಯನ್ ರಾಷ್ಟ್ರಗಳ ಆರೋಪ

ನೈಸರ್ಗಿಕ ಅನಿಲ ಬಳಸಿ ರಷ್ಯಾ ಬ್ಲಾಕ್ ಮೇಲ್ : ಯುರೋಪಿಯನ್ ರಾಷ್ಟ್ರಗಳ ಆರೋಪ

ವಾರ್ಸಾ: ರಷ್ಯಾ  ನಿಯಂತ್ರಿತ ಇಂಧನ ಕಂಪನಿಯು ಬುಧವಾರ ಎರಡು ಯುರೋಪಿಯನ್ ರಾಷ್ಟ್ರಗಳಿಗೆ ನೈಸರ್ಗಿಕ ಅನಿಲ ಸರಬರಾಜು ಮಾಡುವುದನ್ನು ನಿಲ್ಲಿಸುವುದಾಗಿ ಹೇಳಿದ ನಂತರ ಮಾಸ್ಕೋ ತಮ್ಮ ದೇಶಗಳನ್ನು ಬ್ಲ್ಯಾಕ್‌ಮೇಲ್ ಮಾಡಲು ನೈಸರ್ಗಿಕ ಅನಿಲವನ್ನು ಬಳಸುತ್ತಿದೆ ಎಂದು ನಂತರ ಪೋಲಿಷ್ ಮತ್ತು ಬಲ್ಗೇರಿಯನ್ ನಾಯಕರು ಆರೋಪಿಸಿದ್ದಾರೆ.

ಸ್ನೇಹಯುತವಲ್ಲದ ರಾಷ್ಟ್ರಗಳು ರಷ್ಯಾದ ಕರೆನ್ಸಿ ರುಬೆಲ್ಸ್ ಪಾವತಿಸಬೇಕಾದ ಅಗತ್ಯವಿರುತ್ತದೆ ಎಂದು ರಷ್ಯಾದ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಹೇಳಿಕೆ ನೀಡಿದ್ದರು. ಆದರೆ, ಅದನ್ನು ಬಲ್ಗೇರಿಯಾ ಮತ್ತು ಪೋಲೆಂಡ್ ರಾಷ್ಟ್ರಗಳು ನಿರಾಕರಿಸಿದ ನಂತರ ಅನಿಲ ಪೂರೈಕ ಸರಬರಾಜು ಮಾಡುವುದನ್ನು ಸ್ಥಗಿತಗೊಳಿಸುವುದಾಗಿ ರಷ್ಯಾ ಹೇಳಿದೆ.

ಏಪ್ರಿಲ್ 1 ರಿಂದ ಬಲ್ಗೇರಿಯಾ ಮತ್ತು ಪೋಲೆಂಡ್ ಯಾವುದೇ ಪಾವತಿಯನ್ನು ಸ್ವೀಕರಿಸದ ಕಾರಣದಿಂದಾಗಿ ಬುಧವಾರದಿಂದ ನೈಸರ್ಗಿಕ ಅನಿಲ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ರಷ್ಯಾದ ಇಂಧನ ದೈತ್ಯ ಕಂಪನಿ ಗಜ್ ಪ್ರೊಮ್ ಹೇಳಿಕೆಯಲ್ಲಿ ತಿಳಿಸಿದೆ.

ಉಕ್ರೇನ್ ವಿರುದ್ಧ ಯುದ್ಧದಿಂದಾಗಿ ರಷ್ಯಾದ ವಿರುದ್ಧ ಹೇರಲಾದ ಹೊಸ ನಿರ್ಬಂಧಗಳಿಗೆ ಪ್ರತೀಕಾರ ಎಂಬಂತೆ ರಷ್ಯಾ ಇದೀಗ ನೈಸರ್ಗಿಕ ಅನಿಲ ಪೂರೈಕೆಯನ್ನು ಸ್ಥಗಿತಗೊಳಿಸಿರುವುದಾಗಿ ಭಾವಿಸುವುದಾಗಿ ಪೋಲಿಷ್ ಪ್ರಧಾನ ಮಂತ್ರಿ ಪ್ರಧಾನ ಮಂತ್ರಿ ಮಾಟಿಯುಸ್ಜ್ ಮೊರಾವಿಕಿ ಪೋಲೆಂಡ್‌ನ ಸಂಸತ್ತಿಗೆ ತಿಳಿಸಿದ್ದಾರೆ.  ರಷ್ಯಾದ ನೈಸರ್ಗಿಕ ಅನಿಲ ಬ್ಲಾಕ್ ಮೇಲೆ ಪೋಲೆಂಡ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಮೊರಾವಿಕಿ ಹೇಳಿದಾಗ, ಅಲ್ಲಿನ ಜನಪ್ರತಿನಿಧಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!