ಉಡುಪಿ : ಸಾರ್ವಜನಿಕ ಪಡಿತರ ವ್ಯವಸ್ಥೆಯ ಅಡಿಯಲ್ಲಿ ಉಚಿತ ಪಡಿತರ ಪಡೆದು ಇತರರಿಗೆ ಮಾರಾಟ ಮಾಡುವವರ ಪಡಿತರ ಚೀಟಿ ರದ್ದುಗೊಳಿಸಲು ಇಲಾಖೆ ಮುಂದಾಗಿದೆ.
ಪಡಿತರದಲ್ಲಿ ಕರಾವಳಿ ಜಿಲ್ಲೆಗಳಿಗೆ ಹೆಚ್ಚಾಗಿ ಬೆಳ್ತಿಗೆ ಅಕ್ಕಿಯನ್ನು ನೀಡುತ್ತಿದ್ದು, ಹಲವರು ತಮಗೆ ಬೇಕಾದಷ್ಟು ಅಕ್ಕಿಯನ್ನು ಇರಿಸಿಕೊಂಡು ಉಳಿದುದನ್ನು ಕೆ.ಜಿ. ಗೆ 10 ರಿಂದ 12 ರೂ. ನಂತೆ ಮಾರಾಟ ಮಾಡುತ್ತಾರೆ. ಈ ಬಗ್ಗೆ ಮಾಹಿತಿ ದೊರೆತಲ್ಲಿ ತಾಲೂಕಿನ ಆಹಾರ ನಿರೀಕ್ಷಕರ ಮೂಲಕ ದಾಳಿ ನಡೆಸಿ ಅಕ್ಕಿಯನ್ನು ವಶಪಡಿಸಿಕೊಂಡು ಕಾರ್ಡ್ ಕೂಡಾ ರದ್ದು ಮಾಡುವ ಅಧಿಕಾರ ಇಲಾಖೆ ಅಧಿಕಾರಿಗಳಿಗೆ ಇದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
1967 ಗೆ ಕರೆ ಮಾಡಿ
ಪಡಿತರ ಆಹಾರ ಧಾನ್ಯ ಮಾರಾಟ ಮಾಡುತ್ತಿರುವ ಮಾಹಿತಿ ದೊರೆತಲ್ಲಿ ಸಾರ್ವಜನಿಕರು 1967 ಅಥವಾ ತಹಶೀಲ್ದಾರ್ ಕಚೇರಿ/ ಉಪನಿರ್ದೇಶಕರ ಕಚೇರಿಗೆ ದೂರು ಸಲ್ಲಿಸಬೇಕಾಗಿ ಜಿಲ್ಲಾಧಿಕಾರಿ ಕೂರ್ಮಾರಾವ್ ತಿಳಿಸಿದ್ದಾರೆ.