ಹುಣಸೂರು : ಸೋಮವಾರ ರಾತ್ರಿ ಹುಣಸೂರಿನಲ್ಲಿ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದ ಸಂಸದ ಪ್ರಜ್ವಲ್ ರೇವಣ್ಣ ಅವರು ಟೋಪಿ ಹಾಕಿಸಿಕೊಳ್ಳಲು ನಿರಾಕರಿಸಿದರು.
ಮುಸ್ಲಿಂ ಯುವಕರು ಸಂಸದರಿಗೆ ಟೋಪಿ ಹಾಕಲು ಮುಂದಾದಾಗ ನಯವಾಗಿಯೇ ನಿರಾಕರಿಸಿ, ಕೈಯಲ್ಲಿ ಹಿಡಿದುಕೊಂಡು ಮುಂದೆ ಸಾಗಿದರು.
ಬಳಿಕ ಸಂಘಟಕರು ಉಪಾಹಾರ ಸೇವಿಸುವಂತೆ ಮಾಡಿದ ಮನವಿಗೆ ಎಲ್ಲರೊಂದಿಗೆ ಊಟಕ್ಕೆ ಕುಳಿತ ಪ್ರಜ್ವಲ್ ಸಿಹಿ ಮಾತ್ರ ತಿಂದು ಊಟ ನಿರಾಕರಿಸಿರುವುದು ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.