ಹೆಬ್ರಿ : ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಎ. 25 ರಂದು ಬಂಗಾರುಗುಡ್ಡೆ, ದೇಕಿಬೆಟ್ಟುವಿನಲ್ಲಿ ನಡೆದಿದೆ. ನಾರಾಯಣ ನಾಯ್ಕ (78) ಮೃತಪಟ್ಟ ದುರ್ದೈವಿ. ಕಾಲು ನೋವಿನ ಬಗ್ಗೆ 2 ವರ್ಷಗಳಿಂದ ಆಸ್ಪತ್ರೆಗೆ ತೆರಳಿ ವೈದ್ಯರಿಗೆ ತೋರಿಸಿದ್ದು, ವೈದ್ಯರು ಅವರಿಗೆ ಯಾವ ಸಮಸ್ಯೆಯೂ ಇಲ್ಲ ಎಂದು ತಿಳಿಸಿದ್ದರು. ಆದರೂ ಗುಣಮುಖವಾಗದ ಕಾಲುನೋವಿನ ಹಿನ್ನೆಲೆಯಲ್ಲಿ ಖಿನ್ನತೆಗೆ ಒಳಗಾಗಿದ್ದ ಅವರು, ಈ ಹಿಂದೆಯೂ ಆತ್ಮಹತ್ಯೆಗೆ ಪ್ರಯತ್ನ ನಡೆಸಿದ್ದರು.
ಎ. 25 ರಂದು ಮನೆಯ ಹಿಂದುಗಡೆ ಮರದ ಜಂತಿಗೆ ನೇಣು ಬಿಗಿದುಕೊಂಡು ಮೃತಪಟ್ಟಿರುವುದಾಗಿ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.