ಭಾರತದ ವಿರುದ್ಧ ಅಪಪ್ರಚಾರ: 16 ಯೂಟ್ಯೂಬ್‌ ಚಾನೆಲ್‌ಗಳನ್ನು ರದ್ದು ಮಾಡಿದ ಕೇಂದ್ರ ಸರ್ಕಾರ

ನವದೆಹಲಿ : ದೇಶದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದ 16 ಯೂಟ್ಯೂಬ್ ಚಾನೆಲ್‌ಗಳನ್ನು ಭಾರತ ಸರ್ಕಾರ ರದ್ದುಗೊಳಿಸಿದೆ.

ಈ ಪೈಕಿ 10 ಚಾನೆಲ್‌ಗಳು ಭಾರತದ್ದಾಗಿದ್ದು, 6 ಚಾನೆಲ್‌ಗಳು ಪಾಕಿಸ್ಥಾನಕ್ಕೆ ಸೇರಿದವುಗಳಾಗಿವೆ ಎಂದು ಮೂಲಗಳು ಹೇಳಿವೆ. ಪಾಕಿಸ್ಥಾನಕ್ಕೆ ಸೇರಿದ್ದ 22 ಯೂಟ್ಯೂಬ್ ಚಾನೆಲ್‌ಗಳನ್ನು ಕೆಲ ದಿನಗಳ ಹಿಂದಷ್ಟೇ ಭಾರತ ಸರ್ಕಾರ ರದ್ದು ಮಾಡಿತ್ತು. ಇದೀಗ ಮತ್ತೆ 16 ಚಾನೆಲ್‌ಗಳನ್ನು ಪ್ರಸಾರ ಮಾಡುವುದನ್ನು ನಿಷೇಧಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಸರ್ಕಾರ, ರದ್ದು ಮಾಡಲಾದ ಯೂಟ್ಯೂಬ್ ಚಾನೆಲ್‌ಗಳು ಸುಳ್ಳು ಸುದ್ದಿ ಹಬ್ಬಿರುವ ಮೂಲಕ ಜನ, ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ. ರಾಷ್ಟ್ರೀಯ ಭದ್ರತೆಗೆ ಧಕ್ಕೆ ಮಾಡಿದ ಆರೋಪದಡಿ ನಿರ್ಬಂಧ ಹೇರಲಾಗಿತ್ತು ಎಂದು ತಿಳಿಸಿದೆ.









































































































































































error: Content is protected !!
Scroll to Top