Saturday, May 21, 2022
spot_img
Homeಹೆಬ್ರಿ ಸುದ್ದಿಕಡ್ತಲ ಗ್ರಾ. ಪಂ. ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಗುದ್ದಲಿ ಪೂಜೆ

ಕಡ್ತಲ ಗ್ರಾ. ಪಂ. ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಗುದ್ದಲಿ ಪೂಜೆ

ಕಡ್ತಲ : ಗ್ರಾ. ಪಂ. ವ್ಯಾಪ್ತಿಯಲ್ಲಿ ಎ. 26 ರಂದು ಸಚಿವ ವಿ. ಸುನಿಲ್‌ ಕುಮಾರ್‌ ವಿವಿಧ ಅಭಿವೃದ್ಧಿ ಕಾಮಗಾರಿಗಳ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು. ಕಡ್ತಲ ತೀರ್ಥೊಟ್ಟು ಹೊಳೆಗೆ ಕಿಂಡಿ ಅಣೆಕಟ್ಟು (200 ಲಕ್ಷ ರೂ.), ಕಡ್ತಲ ದರ್ಬುಜೆ ರಸ್ತೆ ಕಾಂಕ್ರೀಟಿಕರಣ (200 ಲಕ್ಷ ರೂ.), ಜಲಜೀವನ್‌ ಮಿಷನ್‌ ಯೋಜನೆಯಡಿ ಕಾಮಗಾರಿಗಳು (200 ಲಕ್ಷ ರೂ.), ಎಳ್ಳಾರೆ ಚೆನ್ನಿಬೆಟ್ಟು- ಬೆಂಬರ ಬೈಲು ರಸ್ತೆ ಕಾಮಗಾರಿ (200 ಲಕ್ಷ ರೂ.), ಕುಕ್ಕುಜೆ – ಮುಂಡಾರು ರಸ್ತೆ ಕಾಮಗಾರಿ (150 ಲಕ್ಷ ರೂ.), ಎಳ್ಳಾರೆ ಮಾವಿನ ಕಟ್ಟೆ ರಸ್ತೆ ಕಾಮಗಾರಿ (100 ಲಕ್ಷ ರೂ.), ಕಡ್ತಲ ಜಡ್ಡುಗಡ್ಡೆ ಬಳಿ ರಸ್ತೆ ಅಗಲೀಕರಣ (100 ಲಕ್ಷ ರೂ.), ಎಳ್ಳಾರೆ ಚೆನ್ನಿಬೆಟ್ಟು ದೇವಸ್ಥಾನಬೆಟ್ಟು ರಸ್ತೆ ಅಗಲೀಕರಣ (100 ಲಕ್ಷ ರೂ.), ಎಳ್ಳಾರೆ ಹೊಯ್ಗೆಜಡ್ಡು, ದೇವಸ್ಥಾನ – ಕೋಂಬೆ ರಸ್ತೆ (75 ಲಕ್ಷ ರೂ.), ಎಳ್ಳಾರೆ ಹೊನ್ನೆಜಡ್ಡು ಕೆರೆ ಅಭಿವೃದ್ಧಿ ಕಾಮಗಾರಿ (50 ಲಕ್ಷ ರೂ.), ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಾಮಗಾರಿಗಳು (50 ಲಕ್ಷ ರೂ.), ಕಡ್ತಲ ಮಾದರಿ ಅಂಗನವಾಡಿ (30 ಲಕ್ಷ ರೂ.) ಹಾಗೂ ಇನ್ನಿತರ ಕಾಮಗಾರಿಗಳು ಸೇರಿ ಒಟ್ಟು 15 ಕೋಟಿ ರೂ. ಮೀರಿದ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆಯನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಕಡ್ತಲ ಗ್ರಾ .ಪಂ. ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಪಂ. ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!