6 – 12 ವರ್ಷದ ಮಕ್ಕಳಿಗೆ ಕೋವ್ಯಾಕ್ಸಿನ್ ನೀಡಲು ಡಿಸಿಜಿಐ ಅನುಮತಿ

ನವದೆಹಲಿ: ಡಿಸಿಜಿಐ (ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್) ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಅನ್ನು 6 -12 ವರ್ಷದ ಒಳಗಿನ ಮಕ್ಕಳಿಗೆ ನಿರ್ಬಂಧಿತ ತುರ್ತು ಬಳಕೆಗೆ ಅನುಮೋದನೆ ನೀಡಿದೆ.

ಪ್ರಸ್ತುತ 15 – 18 ವರ್ಷದೊಳಗಿನ ಮಕ್ಕಳಿಗೆ ಕೋವ್ಯಾಕ್ಸಿನ್ ನೀಡಲಾಗುತ್ತಿದೆ. 12 – 14 ವರ್ಷದ ಒಳಗಿನ ಮಕ್ಕಳಿಗೆ ಬಯೋ ಇ ಕಾರ್ಬೆವ್ಯಾಕ್ಸ್ ಅನ್ನು ಬಳಕೆ ಮಾಡಲಾಗುತ್ತಿದೆ. 15 – 18 ರ ವರೆಗಿನ ಮಕ್ಕಳಿಗೆ ಕೋವ್ಯಾಕ್ಸಿನ್ ಅನ್ನು ನೀಡಲು ಡಿಸಿಜಿಐ ಈ ಹಿಂದೆಯೇ ತುರ್ತು ಅನುಮೋದನೆ ನೀಡಿತ್ತು.

ಜನವರಿ 3 ರಿಂದ ತೊಡಗಿದಂತೆ 15 – 18 ವರ್ಷ ದೊಳಗಿನ ಮಕ್ಕಳಿಗೆ ಲಸಿಕೆ ನೀಡಲು ಅಭಿಯಾನ ಆರಂಭಿಸಲಾಗಿತ್ತು. ಮಾರ್ಚ್ 16 ರಿಂದ 12 -1 4 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಲು ಆರಂಭಿಸಲಾಗಿತ್ತು.









































































































































































error: Content is protected !!
Scroll to Top