ಕಾರ್ಕಳ : ತಾಲೂಕಿನಾದ್ಯಂತ ಗುರುವಾರ ಮತ್ತು ಶುಕ್ರವಾರ ಗುಡುಗು ಸಹಿತ ಭಾರೀ ಗಾಳಿ ಮಳೆಯಾಗಿದ್ದು, ಕಾರ್ಕಳದಲ್ಲಿ ಹಲವೆಡೆ ಮನೆಗಳಿಗೆ ಹಾನಿಯಾಗಿದೆ. ಆನೆಕೆರೆ ಭಾರತಿ ಅವರ ವಾಸದ ಮನೆಯ ಹಂಚು, ಸಿಮೆಂಟ್ ಶೀಟ್ ಹಾರಿ ಸುಮಾರು ರೂ. 20 ಸಾವಿರ ನಷ್ಟ ಹಾಗೂ ಗುಂಡ್ಯ 2ನೇ ಅಡ್ಡ ರಸ್ತೆ ಬಳಿಯ ಸವಿತಾ ಅವರ ವಾಸದ ಮನೆಯ ಕಾಂಪೌಂಡ್ ಗೋಡೆ ಕುಸಿದು ಸುಮಾರು ರೂ. 20 ಸಾವಿರ ನಷ್ಟವಾಗಿದೆ. ನಿಟ್ಟೆ ಗ್ರಾಮದ ಬೋರ್ಗಲ್ ಗುಡ್ಡೆ ಎಂಬಲ್ಲಿ ಕರುಣಾಕರ ಪರವ ಎಂಬವರ ವಾಸ್ತವ್ಯದ ಮನೆ ಹಾನಿಯಾಗಿದ್ದು, ಅಂದಾಜು 20,000 ರೂ. ನಷ್ಟವಾಗಿದೆ.

