ಬೆಂಗಳೂರು : ರಾಜ್ಯದಲ್ಲಿ ಬುಲ್ಡೋಜರ್ ಪ್ರಯೋಗದ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಜತೆ ಚರ್ಚಿಸುವುದಾಗಿ ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಸೃಷ್ಟಿಸಿ, ಅದರಲ್ಲಿ ಹೊಡೆತ ತಿಂದವರು ಕಾಂಗ್ರೆಸ್ನವರು ಈಗ ಹುಬ್ಬಳ್ಳಿಯಲ್ಲಿ ಗಲಭೆ ನಡೆದಿದೆ. ಮೊದಲು ಅಮಾಯಕರ ಬಂಧನವಾಗುತ್ತಿರುವುದಾಗಿ ಆಕ್ರೋಶ ವ್ಯಕ್ತಪಡಿಸಿದವರು, ಇಂದು ಕಾಂಗ್ರೆಸ್ನವರ ಬಂಧನವಾಗುತ್ತಿದ್ದು ಈಗ ಆಕ್ರೋಶದ ಹೇಳಿಕೆಗಳಿಲ್ಲ ಎಂದು ವ್ಯಂಗ್ಯವಾಡಿದರು.
ಐಎಸ್ಐ ಸಂಪರ್ಕ, ಪಾಕ್ ಪರ ಜೈ ಅನ್ನುವವರೂ ಇದ್ದಾರೆ. ಅಂತಹ ಕಿಡಿಗೇಡಿಗಳಿಗೆ ವಾಸಿಸಲು ಮನೆಯೂ ಸಿಗಬಾರದು. ಉತ್ತರ ಪ್ರದೇಶದ ಮಾದರಿಯಲ್ಲಿ ನಮ್ಮ ರಾಜ್ಯದಲ್ಲೂ ಬುಲ್ಡೋಜರ್ ಪ್ರಯೋಗ ಜಾರಿಗೆ ಬರಬೇಕು. ಈ ಬಗ್ಗೆ ಸಿಎಂ ಜತೆ ಚರ್ಚಿಸುವುದಾಗಿ ತಿಳಿಸಿರದು.
ರಾಜ್ಯದಲ್ಲಿ ಬುಲ್ಡೋಜರ್ ಪ್ರಯೋಗಕ್ಕೆ ಸಿಎಂ ಜೊತೆ ಚರ್ಚೆ : ಸಚಿವ ಅಶೋಕ್
Recent Comments
ಕಗ್ಗದ ಸಂದೇಶ
on