ನವದೆಹಲಿ: ನೀವು ಭಾರತೀಯ ವಿದ್ಯಾರ್ಥಿಯಾಗಿ ದೇಶದಲ್ಲಿ ಉಳಿದುಕೊಂಡಿದ್ದರೆ ಅಥವಾ ವಿದೇಶದಲ್ಲಿ ನೆಲೆಸಿದ್ದರೆ ಮತ್ತು ವಿದೇಶಕ್ಕೆ ತೆರಳಲು ಯೋಜಿಸುತ್ತಿದ್ದರೆ, ಉನ್ನತ ಶಿಕ್ಷಣಕ್ಕಾಗಿ ಪಾಕಿಸ್ತಾನಕ್ಕೆ ಹೋಗಬೇಡಿ ಎಂದು ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ) ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ತಿಳಿಸಿದೆ.
ಎ. 22ರಂದು ಹೊರಡಿಸಿದ ಜಂಟಿ ಅಧಿಸೂಚನೆಯಲ್ಲಿ ಪಾಕಿಸ್ತಾನದ ಶಿಕ್ಷಣ ಸಂಸ್ಥೆಗಳಲ್ಲಿ ಪದವಿ ಪಡೆಯುವವರು ನಂತರ ಭಾರತದಲ್ಲಿ ಉದ್ಯೋಗ ಅಥವಾ ಉನ್ನತ ವ್ಯಾಸಂಗಕ್ಕೆ ಅರ್ಹರಾಗಿರುವುದಿಲ್ಲ ಎಂದು ಹೇಳಿವೆ. ಆದಾಗ್ಯೂ, ಸುತ್ತೋಲೆಯು ಭಾರತೀಯ ಪೌರತ್ವವನ್ನು ಪಡೆದ ಪಾಕಿಸ್ತಾನಿ ವಲಸಿಗರಿಗೆ ವಿನಾಯಿತಿ ನೀಡುತ್ತದೆ.
ಉನ್ನತ ಶಿಕ್ಷಣವನ್ನು ಪಡೆಯಲು ಪಾಕಿಸ್ತಾನಕ್ಕೆ ಪ್ರಯಾಣಿಸದಂತೆ ಸಂಬಂಧಪಟ್ಟ ಎಲ್ಲರಿಗೂ ಸೂಚಿಸಲಾಗಿದೆ. ಪಾಕಿಸ್ತಾನದ ಯಾವುದೇ ಪದವಿ ಕಾಲೇಜು/ಶಿಕ್ಷಣ ಸಂಸ್ಥೆಗೆ ಪ್ರವೇಶ ಪಡೆಯಲು ಉದ್ದೇಶಿಸಿರುವ ಯಾವುದೇ ಭಾರತೀಯ ಪ್ರಜೆ/ಭಾರತದ ಸಾಗರೋತ್ತರ ಪ್ರಜೆಯು ಪಾಕಿಸ್ತಾನದಲ್ಲಿ ಪಡೆದ ಅಂತಹ ಶೈಕ್ಷಣಿಕ ಅರ್ಹತೆಗಳ(ಯಾವುದೇ ವಿಷಯದಲ್ಲಿ) ಭಾರತದಲ್ಲಿ ಉದ್ಯೋಗ ಅಥವಾ ಉನ್ನತ ವ್ಯಾಸಂಗವನ್ನು ಪಡೆಯಲು ಅರ್ಹರಾಗಿರುವುದಿಲ್ಲ ಎಂದು ಹೇಳಿದೆ.
ಉನ್ನತ ಶಿಕ್ಷಣಕ್ಕಾಗಿ ಪಾಕಿಸ್ತಾನಕ್ಕೆ ತೆರಳಬೇಡಿ : ವಿದ್ಯಾರ್ಥಿಗಳಿಗೆ ಯುಜಿಸಿ, ಎಐಸಿಟಿಇ ಸೂಚನೆ
Recent Comments
ಕಗ್ಗದ ಸಂದೇಶ
on