ಹೆಬ್ರಿ : ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು ಶುಕ್ರವಾರ ಹೆಬ್ರಿಗೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು. ಹೆಬ್ರಿಯ ಚೈತನ್ಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ನಾಯಕರೊಂದಿಗೆ ಪಕ್ಷ ಬಲವರ್ಧನೆ, ಚುನಾವಣೆ ಸಿದ್ಧತೆ ಕುರಿತು ಮಾತನಾಡಿದರು. ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ರಮೇಶ್ ಹೆಗ್ಡೆ ಸೀತಾನದಿ, ಸುರೇಶ್, ದಿನೇಶ್ ಶೆಟ್ಟಿ, ರಂಜನಿ ಹೆಬ್ಬಾರ್ ಮತ್ತು ರೋಶನಿ ಒಲಿವೆರಾ ಹಾಗೂ ವಿವಿಧ ಘಟಕದ ಪ್ರಮುಖರು ಉಪಸ್ಥಿತರಿದ್ದರು.
Recent Comments
ಕಗ್ಗದ ಸಂದೇಶ
on