Thursday, May 19, 2022
spot_img
Homeರಾಜ್ಯರುಪ್ಸಾ-ಸರ್ಕಾರದ ನಡುವೆ ಹಗ್ಗಜಗ್ಗಾಟ ಬಡ ವಿದ್ಯಾರ್ಥಿಗಳ ಆರ್.ಟಿ.ಇ ಸೀಟ್‌ಗೆ ಬೀಳುತ್ತಾ ಕತ್ತರಿ

ರುಪ್ಸಾ-ಸರ್ಕಾರದ ನಡುವೆ ಹಗ್ಗಜಗ್ಗಾಟ ಬಡ ವಿದ್ಯಾರ್ಥಿಗಳ ಆರ್.ಟಿ.ಇ ಸೀಟ್‌ಗೆ ಬೀಳುತ್ತಾ ಕತ್ತರಿ

ಬೆಂಗಳೂರು: ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆರ್‌ಟಿಇ ಯೋಜನೆ ಬಹು ದೊಡ್ಡ ವರದಾನವಾಗಿದೆ. ಆರ್‌ಟಿಇ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆದು 15 ದಿನ ಕಾಲಾವಕಾಶ ಕೊಡಲಾಗಿದೆ. ಹಣ ಬಿಡುಗಡೆ ಮಾಡದೆ ಹೋದರೆ 2022-23ನೇ ಶೈಕ್ಷಣಿಕ ವರ್ಷದಿಂದ ಆರ್‌ಟಿಇ ದಾಖಲಾತಿ ಮಾಡಿಸಿಕೊಳ್ಳದೇ ಇರಲು ರುಪ್ಸಾ ನಿರ್ಧಾರ ಮಾಡಿದೆ. ಆದರೆ ಈ ಯೋಜನೆಗೆ ಈ ವರುಷ ಬ್ರೇಕ್ ಹಾಕಲು ಖಾಸಗಿ ಶಾಲೆಗಳು ಮುಂದಾಗಿವೆ. ಯಾಕೆಂದರೆ ಖಾಸಗಿ ಶಾಲೆಗಳಿಗೆ ಬರಬೇಕಾದ ಬಾಕಿ ಮೊತ್ತವನ್ನು ಸರ್ಕಾರ ನೀಡುತ್ತಿಲ್ಲ. ಇದರಿಂದ ರುಪ್ಸಾ ವ್ಯಾಪ್ತಿಯ ಖಾಸಗಿ ಶಾಲೆಗಳು ಸರ್ಕಾರಕ್ಕೆ ಸೆಡ್ಡು ಹೊಡೆದಿವೆ. ಮೇಲಿಂದ ಮೇಲೆ ಬೆಲೆ ಏರಿಕೆಯಾಗುತ್ತಿದೆ. ಇಂಥ ಬೆಲೆ ಏರಿಕೆ ನಡುವೆ ಬಡ ಮಕ್ಕಳು ಖಾಸಗಿ ಶಾಲೆಗಳಲ್ಲಿ ಉಚಿತವಾಗಿ ಓದುವ ಸರಕಾರದ ಪ್ರಮುಖ ಆರ್.ಟಿ.ಇ ಯೋಜನೆಗೆ ಇದೀಗ ಸಂಕಷ್ಟ ಎದುರಾಗಿದೆ.
ಸರ್ಕಾರ ಪ್ರತಿ ವರುಷ ಖಾಸಗಿ ಶಾಲೆಗಳಿಗೆ ಹಣ ನೀಡಿ ಬಡ ವಿದ್ಯಾರ್ಥಿಗಳಿಗೆ ಸೀಟು ಕೊಡಿಸಿ ಉಚಿತ ಶಿಕ್ಷಣ ನೀಡುತ್ತಿದೆ. ಆದರೆ ಕಳೆದ ಮೂರು ವರುಷದಿಂದ ಖಾಸಗಿ ಶಾಲೆಗಳಿಗೆ ನೀಡುವ ಬಾಕಿ ಮೊತ್ತವನ್ನು ಸಮರ್ಪಕವಾಗಿ ನೀಡಿಲ್ಲ. ರಾಜ್ಯದಲ್ಲಿ 12 ಸಾವಿರ ಖಾಸಗಿ ಶಾಲೆಗಳಲ್ಲಿ ಒಟ್ಟು 7 ಲಕ್ಷ‌ ಬಡ ವಿದ್ಯಾರ್ಥಿಗಳು ಆರ್ ಟಿ ಇ ಫಲಾನುಭವಿಗಳಿದ್ದಾರೆ. ಈ ವರುಷ 6.5 ಲಕ್ಷ‌ ವಿದ್ಯಾರ್ಥಿಗಳು ಅರ್ ಟಿ ಇ ವಿದ್ಯಾರ್ಥಿಗಳು ಇದ್ದಾರೆ. ಬರುವ ಶೈಕ್ಷಣಿಕ ವರುಷ ಏಳು ಸಾವಿರ ವಿದ್ಯಾರ್ಥಿಗಳು ಆರ್. ಟಿ. ಇ ಸೇರ್ಪಡೆಯಾಗಿದ್ದಾರೆ. ಆದರೆ ಖಾಸಗಿ ಶಾಲೆಗಳಿಗೆ ಸರ್ಕಾರ ಇದುವರೆಗೆ 370 ಕೋಟಿ ಹಣ ಬಾಕಿ ಮೊತ್ತವನ್ನು ಸರ್ಕಾರ ನೀಡಬೇಕಿದೆ. ಅನುದಾನ ಬಿಡುಗಡೆಯಾಗದೇ ಹೋದಲ್ಲಿ ಆರ್ ಟಿ ಇ ದಾಖಲಾತಿ ಮಾಡದೇ ಇರಲು ರುಪ್ಸಾ ಖಾಸಗಿ ಶಾಲೆಗಳ ಸಂಘ ನಿರ್ಧರಿಸಿದೆ. ಕಳೆದೆರಡು ವರುಷ ಕೊರೋನಾದಿಂದ ಶೈಕ್ಷಣಿಕ ಚಟುವಟಿಕೆ ಸಮರ್ಪಕವಾಗಿ ನಡೆದಿಲ್ಲ. ಖಾಸಗಿ ಶಾಲೆಗಳಿಗೆ ಕಳೆದ ವರ್ಷದ ಆರ್.ಟಿ.ಇ ಹಣ ಬಿಡುಗಡೆ ಆಗಿಲ್ಲ. ಶೇ.60 ರಷ್ಟು ಖಾಸಗಿ ಶಾಲೆಗಳಿಗೆ ಕಳೆದ ವರ್ಷದ ಆರ್.ಟಿ.ಇ ಅನುದಾನ ಬಿಡುಗಡೆಯಾಗಿಲ್ಲ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!