ಕಾರ್ಕಳ : ಈದು ಗ್ರಾಮ ಪಂಚಾಯತ್ ಗೆ ಪ್ರಭಾರ ನೆಲೆಯಲ್ಲಿ ನಿಯೋಜನೆಗೊಂಡಿರುವ ಪಿಡಿಒ ರವಿರಾಜ್ ಅವರು ಕರ್ತವ್ಯ ನಿರ್ವಹಿಸಲು ಪಂಚಾಯತ್ ಗೆ ಸರಿಯಾಗಿ ಬರುತಿಲ್ಲ ಎಂದು ಕಾಂಗ್ರೆಸ್ ಸದಸ್ಯರು ಎ. 21ರಂದು ಪಂಚಾಯತ್ ಮುಂಭಾಗ ಪ್ರತಿಭಟನೆ ನಡೆಸಿದರು.
ಪಿಡಿಒ ಇಲ್ಲದೇ ಪಂಚಾಯತ್ ಕೆಲಸ ಕಾರ್ಯಗಳು ಸಮರ್ಪಕವಾಗಿ ನಡೆಯದೇ ಗ್ರಾಮಸ್ಥರಿಗೆ ತೊಂದರೆಯಾಗಿದೆ. ಕೂಡಲೇ ಬದಲಿ ಪಿಡಿಓ ನೇಮಕವಾಗಬೇಕು ಪ್ರತಿಭಟನಕಾರರು ಈ ಸಂದರ್ಭ ಆಗ್ರಹಿಸಿದರು.
ಪಂಚಾಯತ್ ಅಧ್ಯಕ್ಷೆ ಜಯಂತಿ ಸೇರಿದಂತೆ 13 ಮಂದಿ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.