ಕಾರ್ಕಳ : ಸಾಲ ಪಡೆದು ಅದನ್ನು ಮರುಪಾವತಿಸದೇ ಮೋಸ ಮಾಡಿರುವ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೌಡೂರು ಗ್ರಾಮದ ಜಾರ್ಕಳ ಕುಕ್ಕಿಲ ರಸ್ತೆಯ ನಿವಾಸಿ ವಿಲ್ಫ್ರೆಡ್ ದೇಸ ಎಂಬವರಿಂದ ರೀಟಾ ಮಾರ್ಟಿಸ್ (50), ಫೆಲಿಕ್ಸ್ ಮಾರ್ಟಿಸ್ (56), ರೋಸ್ಟನ್ ಮಾರ್ಟಿಸ್ (31) ಮನೆಕಟ್ಟಲು ಮತ್ತು ವಿದ್ಯಾಭ್ಯಾಸದ ಸಲುವಾಗಿ 2012-16ರ ಅವಧಿಯಲ್ಲಿ ಒಟ್ಟು 10 ಲಕ್ಷದ 10 ಸಾವಿರ ರೂ. ಸಾಲವಾಗಿ ತೆಗೆದುಕೊಂಡು ವಾಪಸ್ಸು ನೀಡಿಲ್ಲ. ಜ. 24, 2022ರಂದು ವಿಲ್ಫ್ರೆಡ್ ದೇಸ ಅವರು ಸಾಲದ ಹಣ ವಾಪಸು ನೀಡುವಂತೆ ಕೇಳಿದಾಗ ಕೊಡುವುದಿಲ್ಲವೆಂದು ಹೇಳಿ ಮೊಸ ಮಾಡಿರುವುದಾಗಿ ವಿಲ್ಫ್ರೆಡ್ ದೂರಿನಲ್ಲಿ ತಿಳಿಸಿದ್ದಾರೆ. ನ್ಯಾಯಾಲಯದ ಖಾಸಗಿ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Recent Comments
ಕಗ್ಗದ ಸಂದೇಶ
on