ಬೆಂಗಳೂರು : ರಾಜ್ಯದಲ್ಲಿ ಕಲ್ಲಿದ್ದಲ್ಲು ಕೊರತೆ ಉಂಟಾಗಿದೆ, ವಿದ್ಯುತ್ ಕ್ಷಾಮವಿದೆ ಎಂದು ಕಾಂಗ್ರೆಸ್ ವಿನಾಕಾರಣ ಹುಯಿಲೆಬ್ಬಿಸಿ, ವಾಸ್ತವ ವಿಚಾರವನ್ನು ಮರೆಮಾಚುವ ಷಡ್ಯಂತ್ರವನ್ನು ನಡೆಸುತ್ತಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಕಿಡಿಕಾರಿದ್ದಾರೆ.
ಬೇಸಿಗೆಯಲ್ಲಿ ವಿದ್ಯುತ್ ಸಮಸ್ಯೆ ಕಾಡಬಾರದೆಂಬ ಮುಂದಾಲೋಚನೆಯೊಂದಿಗೆ ಕಲ್ಲಿದ್ದಲ್ಲು ದಾಸ್ತಾನಿಗೆ ಆದ್ಯತೆ ನೀಡಲಾಗಿದ್ದು, ರಾಜ್ಯದ ಸರಾಸರಿ ಬೇಡಿಕೆಯ ಅರ್ಧದಷ್ಟು ಭಾಗ ಸೋಲಾರ್ ಹಾಗೂ ಪವನಶಕ್ತಿ ಮೂಲದಿಂದ ಲಭಿಸುತ್ತಿದೆ. ಈ ನಡುವೆ ವಿದ್ಯುತ್ ಕ್ಷಾಮ ಎಂಬ ಕಾಂಗ್ರೆಸ್ ಕಟ್ಟುಕತೆಯಲ್ಲಿ ಯಾವುದೇ ಅರ್ಥವಿಲ್ಲವೆಂದು ಅವರು ತಿಳಿಸಿದ್ದಾರೆ.
ಕೇಂದ್ರದಿಂದ ರಾಜ್ಯಕ್ಕೆ ಪ್ರತಿನಿತ್ಯ ಸರಾಸರಿ 13,500 ರಿಂದ 14,500 ರೇಕ್ ಕಲ್ಲಿದ್ದಲ್ಲು ಪೂರೈಕೆಯಾಗುತ್ತಿದ್ದು, ರಾಜ್ಯದಲ್ಲಿ 10,400 ಮೆಗಾ ವ್ಯಾಟ್ನಷ್ಟು ವಿದ್ಯುತ್ ಬೇಡಿಕೆಯಿದೆ. ಎಂತಹದೇ ಸ್ಥಿತಿ ನಿರ್ಮಾಣವಾದರೂ ರಾಜ್ಯದ ಎಲ್ಲಾ ಬೇಡಿಕೆಗಳನ್ನು ಮೂರು ದಿನಗಳ ಕಾಲ ನೀಗಿಸುವಷ್ಟು ಕಲ್ಲಿದ್ದಲ್ಲು ದಾಸ್ತಾನು ರಾಜ್ಯದಲ್ಲಿದೆ. ಹಾಗಾಗಿ ಕಾಂಗ್ರೆಸ್ ಹೇಳುತ್ತಿರುವ ಸುಳ್ಳು ಸುದ್ದಿಗಳಿಗೆ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.
ಅಧಿಕಾರದ ಅಭಾವದಿಂದ ರೋಸಿ ಹೋಗಿರುವ ಕಾಂಗ್ರೆಸ್ ಕರ್ನಾಟಕದಲ್ಲಿ ವಿದ್ಯುತ್ ಅಭಾವ ಇದೆ ಎಂದು ವಿನಾಕಾರಣ ದೂರಿದರೆ ಜನರು ಶಾಕ್ ಟ್ರೀಟ್ ಮೆಂಟ್ ನೀಡುತ್ತಾರೆ, ಸಿದ್ದರಾಮಯ್ಯ ಸರಕಾರದಲ್ಲಿ ರಾಜ್ಯದಲ್ಲಿದ್ದ ಕತ್ತಲೆಭಾಗ್ಯವನ್ನು ಸಾರ್ವಜನಿಕರು ಇನ್ನೂ ಮರೆತಿಲ್ಲ ಅಪಪ್ರಚಾರ ನಡೆಸುವ ಮೊದಲು ಕಾಂಗ್ರೆಸಿಗರು ಹತ್ತು ಬಾರಿ ಯೋಚಿಸಿ ಎಂದು ವ್ಯಂಗ್ಯವಾಡಿದ್ದಾರೆ.
ವಿದ್ಯುತ್ ಅಭಾವವೆಂಬ ಕಾಂಗ್ರೆಸ್ ಕಟ್ಟು ಕಥೆಗೆ ಅರ್ಥವಿಲ್ಲ : ಸಚಿವ ಸುನಿಲ್
Recent Comments
ಕಗ್ಗದ ಸಂದೇಶ
on