Tuesday, May 17, 2022
spot_img
Homeಸ್ಥಳೀಯ ಸುದ್ದಿಕಾರ್ಕಳದಲ್ಲಿ ದನ ಕಳ್ಳತನ - ಶಾಸಕರಿಗೆ ಸವಾಲೊಡ್ಡುವಂತಿದೆ

ಕಾರ್ಕಳದಲ್ಲಿ ದನ ಕಳ್ಳತನ – ಶಾಸಕರಿಗೆ ಸವಾಲೊಡ್ಡುವಂತಿದೆ

ಕಾರ್ಕಳ : ಕಾರ್ಕಳದಲ್ಲಿ ನಿರಂತರವಾಗಿ ದನಕಳ್ಳತನವಾಗುತ್ತಿರುವುದು ಆತಂಕಕಾರಿ ಸಂಗತಿ. ಇತ್ತೀಚೆಗೆ ಇದೇ ಪರಿಸರದ ಒಂದೇ ಮನೆಯಿಂದ 22 ದನಗಳನ್ನು ಕಳ್ಳತನ ಮಾಡಲಾಗಿತ್ತು. ಶಾಸಕರು ಅವರಿಗೊಂದು ಗೋವು ನೀಡಿ, ಬಳಿಕ ಪೊಲೀಸ್‌ ಅಧಿಕಾರಿಗಳನ್ನು ಕರೆದು ಇಂತಹ ಕೃತ್ಯ ಮುಂದುವರಿಯಬಾರದು ಎಂದು ಸೂಚಿಸಿದ್ದರು. ಆದರೂ ಗೋಕಳ್ಳತನಕ್ಕೆ ಕಡಿವಾಣ ಬಿದ್ದಿಲ್ಲ. ಇವತ್ತು ಕಾರ್ಕಳದಲ್ಲಿ ಹಿಂದೂ ಘರ್ಜನೆಯ ನಾಯಕ ಎಂದು ಹೇಳುವಂತಹ ಶಾಸಕರಿದ್ದರೂ ಗೋ ಕಳ್ಳತನ ಅವ್ಯಾಹತವಾಗಿ ನಡೆಯುತ್ತಿದೆ. ಇದು ಸ್ಥಳೀಯ ಶಾಸಕರಿಗೆ ಸವಾಲು ಎಂದು ಹಿಂದೂ ಜಾಗರಣ ವೇದಿಕೆ ಜಿಲ್ಲಾಧ್ಯಕ್ಷ ಪ್ರಶಾಂತ್‌ ನಾಯಕ್‌ ಅಭಿಪ್ರಾಯಪಟ್ಟಿದ್ದಾರೆ.

ಶಾಸಕರು ಎಡವಿದ್ದಾರೆ
ಗೋ ಕಳವಾದ ಮನೆಗೆ ಎ. 20ರಂದು ಭೇಟಿ ನೀಡಿ ಮಾತನಾಡಿದ ಅವರು, ನಮ್ಮ ಶಾಸಕರು ಗೋಕಳ್ಳರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಎಲ್ಲೋ ಎಡವಿದ್ದಾರೆ ಎಂದು ಅನ್ನಿಸುತ್ತಿದೆ. ಇದು ಇದೇ ರೀತಿ ಮುಂದುವರೆದಲ್ಲಿ ಸರಕಾರ ಸುಮ್ಮನಿರಬಹುದು. ಆದರೆ, ಹಿಂದೂ ಸಮಾಜ ಇದಕ್ಕೆ ತಕ್ಕ ಉತ್ತರ ನೀಡಲಿದೆ. ದನ ಸಾಕಿ ಜೀವನ ನಡೆಸುತ್ತಿರುವ ಬಡ ಜನರ ರಕ್ಷಣೆಗೆ ಒಂದು ಜವಾಬ್ದಾರಿಯುತ ಸಂಘಟನೆಯ ನೆಲೆಯಲ್ಲಿ ಹಿಂದೂ ಜಾಗರಣಾ ವೇದಿಕೆ ಕಾರ್ಯನಿರ್ವಹಿಸಲಿದೆ.
ದನ ಕಳ್ಳತದ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳದೇ ಇದ್ದಲ್ಲಿ ನಮ್ಮ ಕಾರ್ಯಕರ್ತರೇ ಸೂಕ್ತ ಕ್ರಮವಹಿಸಲಿದ್ದಾರೆ. ಇಂದು ದನ ಕಳ್ಳತನವಾದದ್ದೇ ಕೊನೆಯಾಗಬೇಕು. ಇಲ್ಲವಾದಲ್ಲಿ ಇನ್ನು ಮುಂದೆ ಸರಕಾರಕ್ಕಾಗಲಿ, ಪೊಲೀಸ್ ಠಾಣೆಗಾಗಲಿ ಈ ಕುರಿತು ದೂರು ಕೊಡುವ ನಿಯಮವಿಲ್ಲ. ಇನ್ನು ಮುಂದೇನಿದ್ದರೂ ನಾವೇ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಪ್ರಶಾಂತ್‌ ನಾಯಕ್‌ ಎಚ್ಚರಿಕೆ ನೀಡಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!