ಕಾರ್ಕಳ : ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಎ. 21ರಂದು ಸಚಿವ ವಿ. ಸುನಿಲ್ ಕುಮಾರ್ ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ.
ಬೆಳಗ್ಗೆ 8.30ಕ್ಕೆ ಬೆಳ್ಮಣ್ ಪಂಚಾಯತ್ ವ್ಯಾಪ್ತಿಯ ಸೂಡ ಕೊಂಬಲ್ಕೆ ಬಳಿ ರೂ. 6 ಕೋಟಿ 88 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕಿಂಡಿ ಅಣೆಕಟ್ಟುವಿಗೆ ಗುದ್ದಲಿ ಪೂಜೆ, 10.30ಕ್ಕೆ ರೆಂಜಾಳ-ಕಲತ್ರಪಾದೆ – ನಲ್ಲೂರು ಸಂಪರ್ಕ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ (1 ಕೋಟಿ ರೂ.), ರೆಂಜಾಳ-ಮಸೀದಿ-ಮಿಯ್ಯಾರು ಸಂಪರ್ಕ ರಸ್ತೆ (25 ಲಕ್ಷ ರೂ.)ಗೆ ಗುದ್ದಲಿ ಪೂಜೆ ನಡೆಯಲಿದೆ.
ಸವಲತ್ತು ವಿತರಣೆ
ಮಿಯ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರಿಗೆ ಬೆಳಿಗ್ಗೆ 11.15ರ ಅನಂತರ ಶ್ರೀ ಮಹಾಲಿಂಗೇಶ್ವರ ಸಭಾಂಗಣದಲ್ಲಿ ಸವಲತ್ತು ವಿತರಣೆ ನಡೆಯಲಿದೆ.
ಸಂಜೆ 3 ಗಂಟೆಗೆ ಕುಂಟಾಡಿ ಭಟ್ರಬೆಟ್ಟು ಮೂಡುಮಠ ರಸ್ತೆಗೆ ಗುದ್ದಲಿ ಪೂಜೆ (ರೂ. 50 ಲಕ್ಷ), ಕಲ್ಯಾ ಅಂಗಾರಕಲ್ಲು ಕೇಪುಲ ಪಟ್ಲ ರಸ್ತೆ ಅಭಿವೃದ್ಧಿಗೆ (ರೂ. 75 ಲಕ್ಷ) ಗುದ್ದಲಿ ಪೂಜೆ, ಸಂಜೆ 4 ಗಂಟೆಗೆ ಬೈಲೂರು – ಜಾರ್ಕಳ – ಶಾಂತೇರಿ- ಕುಕ್ಕಿಲ – ಕುಕ್ಕುದ ಕಟ್ಟೆ – ಸಂಪರ್ಕ ರಸ್ತೆ (2 ಕೋಟಿ), ಕೌಡೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಂಪರ್ಕ ರಸ್ತೆಗೆ (50 ಲಕ್ಷ ರೂ.), ಎಲಿಯಾಳ ಗೋಳಿದಡಿ ರಸ್ತೆ (33 ಲಕ್ಷ ರೂ.), ರಂಗನಪಲ್ಕೆ ಶೇಡಿ ರಸ್ತೆಗೆ (38 ಲಕ್ಷ ರೂ.)ಗುದ್ದಲಿ ಪೂಜೆ ನಡೆಯಲಿದೆ.
ಸಂಜೆ 5 ಗಂಟೆಗೆ ಗೋವಿಂದೂರು-ಮಾವಿನಕಟ್ಟೆ – ನೆಲ್ಲಿಗುಡ್ಡೆ ರಸ್ತೆ ಅಭಿವೃದ್ಧಿಗೆ (25 ಲಕ್ಷ ರೂ.) ಗುದ್ದಲಿ ಪೂಜೆ, ಯರ್ಲಪಾಡಿ ಜಾರ್ಕಳ ಶಾಂತಿಪಲ್ಕೆ ರಸ್ತೆ (50 ಲಕ್ಷ ರೂ.), ಜಾರ್ಕಳ ನೆಲ್ಲಿಗುಡ್ಡೆ ಸಂಪರ್ಕ ರಸ್ತೆ (50 ಲಕ್ಷ ರೂ.), ಯರ್ಲಪಾಡಿ ಅರ್ಬಿ ರಸ್ತೆ ಅಭಿವೃದ್ಧಿ (50 ಲಕ್ಷ ರೂ.), ಗೋವಿಂದೂರು ಕಟ್ಟಾ ರಸ್ತೆ ಅಭಿವೃದ್ಧಿ (50 ಲಕ್ಷ ರೂ.), ಯರ್ಲಪಾಡಿ ಸರಕಾರಿ ಪ್ರೌಢಶಾಲಾ ನೂತನ ಕೊಠಡಿ ಉದ್ಘಾಟನೆ (33 ಲಕ್ಷ ರೂ.), ಗೋವಿಂದೂರು ಸಪ್ತಗಿರಿ ರಸ್ತೆ ಉದ್ಘಾಟನೆ (50 ಲಕ್ಷ ರೂ.) ವೆಚ್ಚದ ರಸ್ತೆಯ ಗುದ್ದಲಿ ಪೂಜೆ ನೆರವೇರಲಿದೆ.