Thursday, May 26, 2022
spot_img
Homeಸುದ್ದಿಕರಿಯಕಲ್ಲು ಗೋ ಕಳ್ಳತನಕ್ಕೆ ಟ್ವಿಸ್ಟ್‌: ಮೇಯಲು ಹೋಗಿದ್ದ ದನ ವಾಪಸ್‌

ಕರಿಯಕಲ್ಲು ಗೋ ಕಳ್ಳತನಕ್ಕೆ ಟ್ವಿಸ್ಟ್‌: ಮೇಯಲು ಹೋಗಿದ್ದ ದನ ವಾಪಸ್‌

ಕಾರ್ಕಳ : ತಮ್ಮ ಹಟ್ಟಿಯಿಂದ ಎ. 19ರ ರಾತ್ರಿ ದನಕಳ್ಳತನವಾಗಿದೆ ಎಂದು ಕಾರ್ಕಳ ನಗರ ಪೊಲೀಸ್‌ ಠಾಣೆಗೆ ಕರಿಯಕಲ್ಲುವಿನ ಮಹಿಳೆಯೋರ್ವರು ದೂರು ದಾಖಲಿಸಿದ್ದು, ಇದೀಗ ಆ ದನ ಪತ್ತೆಯಾಗಿದೆ. ಎ. 19ರ ರಾತ್ರಿ ಹಟ್ಟಿಯಿಂದ ದನ ಹಾಗೂ ಕೋಳಿಗೂಡಿನಲ್ಲಿದ್ದ 5 ಕೋಳಿ ಕಳ್ಳತನವಾಗಿದೆ ಎಂದು ಮೋಹಿನಿ ಮೂಲ್ಯ ಎಂಬವರು ದೂರು ದಾಖಲಿಸಿದ್ದರು. ಎ. 20ರ ಸಂಜೆ ವೇಳೆಗೆ ಮನೆಯ ಹತ್ತಿರ ಅಂದರೆ ಸುಮಾರು 200 ಮೀಟರ್‌ ದೂರದಲ್ಲಿ ದನ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೂರು ದಾಖಲಾದ ಸಂದರ್ಭವೇ ಈ ಕುರಿತು ಅನುಮಾನ ವ್ಯಕ್ತಪಡಿಸಿದ್ದ ಪೊಲೀಸರು ಆ ಪ್ರದೇಶದಿಂದ ಅಷ್ಟು ಸುಲಭದಲ್ಲಿ ದನ ಕಳ್ಳತನವಾಗಲು ಸಾಧ್ಯವಿಲ್ಲ. ಮೇಯಲು ಹೋದ ದನ ವಾಪಸಾಗದೇ ಇರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದರು. ಇದೀಗ ಪೊಲೀಸರ ಊಹೆ ನಿಜವಾಗಿದ್ದು ದನ ವಾಪಸಾಗಿದೆ. ದನವನ್ನು ಪೊಲೀಸರು ಠಾಣೆ ಆವರಣಕ್ಕೆ ತಂದು ಕಟ್ಟಿ ಹಾಕಿರುತ್ತಾರೆ..

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!