ಕಾರ್ಕಳ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಜಿಲ್ಲಾ ಆಯುಷ್ ಇಲಾಖೆ, ಕಾರ್ಕಳ ತಾಲೂಕು ಸಾರ್ವಜನಿಕ ಆಸ್ಪತ್ರೆ , ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಮತ್ತು ವಿವಿಧ ಇಲಾಖೆಗಳ ಆಶ್ರಯದಲ್ಲಿ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಎ. 25ರಂದು ತಾಲೂಕು ಮಟ್ಟದ ಆರೋಗ್ಯ ಮೇಳ ನಡೆಯಲಿದೆ.
ಕೆಎಂಸಿ ಆಸ್ಪತ್ರೆಯ ತಜ್ಞ ವೈದ್ಯರು ಭಾಗವಹಿಸಲಿದ್ದು, ಹೃದಯರೋಗ ತಜ್ಞರು, ಶಸ್ತ್ರ ಚಿಕಿತ್ಸಕರು, ಮಕ್ಕಳ ತಜ್ಞರು, ಸ್ತ್ರೀ ರೋಗ ತಜ್ಞರು, ಎಲುಬು-ಕೀಲು ತಜ್ಞರು, ಚರ್ಮ-ಲೈಂಗಿಕ ತಜ್ಞರು, ಮನೋ ವೈದ್ಯಕೀಯ ಚಿಕಿತ್ಸಕರು, ಕಿವಿ, ಮೂಗು, ಗಂಟಲು ತಜ್ಞರು, ಕಣ್ಣಿನ ಪರೀಕ್ಷಾ ಕೇಂದ್ರ, ದಂತ ಚಿಕಿತ್ಸಾ ಕೇಂದ್ರ, ಉಚಿತ ಔಷಧಿ ಮತ್ತು ಪ್ರಯೋಗಾಲಯ, ಇಸಿಜಿ ಇತರ ಸೇವೆ, ಸಾಂಕ್ರಾಮಿಕ/ಅಸಾಂಕ್ರಾಮಿಕ ರೋಗ ತಪಾಸಣೆ, ಎನ್.ಸಿ.ಡಿ ಕ್ಲಿನಿಕ್(ಮಧುಮೇಹ, ಬಿ.ಪಿ, ಕ್ಯಾನ್ಸರ್), ಆಯುಷ್ ಸೇವೆಗಳು/ ಯೋಗ ಮತ್ತು ಧ್ಯಾನ ತರಬೇತಿ, ಆಪ್ತ ಸಮಾಲೋಚನೆ, ಕೋವಿಡ್-19 ಲಸಿಕಾಕರಣ, ಪೌಷ್ಠಿಕ ಆಹಾರ ಪ್ರಾತ್ಯಕ್ಷತೆ ಮತ್ತು ಮಾಹಿತಿ, ಆಹಾರ ಕಲಬೆರಕೆ ಪರೀಕ್ಷೆ, ವಿವಿಧ ಆರೋಗ್ಯ ಕಾರ್ಯಕ್ರಮಗಳ ಅರಿವು ಮೂಡಿಸುವಿಕೆ, ಇ-ಸಂಜೀವಿನಿ ಮೂಲಕ ತಜ್ಞವೈದ್ಯರ ಸಂಪರ್ಕ, ಆಯುಷ್ಮಾನ್ ಭಾರತ ಅರೋಗ್ಯ ಕರ್ನಾಟಕ ಕಾರ್ಡ್ ವಿತರಣೆ/ ಸೇವೆ, ಯು.ಜಿ.ಐ.ಡಿ. ಕಾರ್ಡ್/ ಡಿಜಿಟಲ್ ಹೆಲ್ತ್ ಐಡಿ ಕಾರ್ಡ್ ವಿತರಣೆ, ಆಯ್ದ ಫಲಾನುಭವಿಗಳಿಗೆ ಕನ್ನಡಕ ವಿತರಣಾ ಸೇವೆಗಳು ಲಭ್ಯವಿರಲಿದೆ.
ಆರೋಗ್ಯ ಮೇಳಕ್ಕೆ ಆಗಮಿಸುವವರು ಈ ಹಿಂದೆ ತಾವು ಚಿಕಿತ್ಸೆ ಪಡೆದ ವೈದ್ಯರ ಚೀಟಿ ಹಾಗೂ ದಾಖಲೆಗಳು, ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್(ಬಿಪಿಎಲ್/ಎಪಿಎಲ್) ಮತ್ತು ಮೊಬೈಲ್ ನಂಬರ್ ನೀಡುವಂತೆ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.