ಉಡುಪಿ: ಸಂತೋಷ್‌ ಆತ್ಮಹತ್ಯೆ ಮಾಡಿಕೊಂಡಿದ್ದ ಲಾಡ್ಜ್‌ನಲ್ಲಿ ಮತ್ತೊಬ್ಬ ಯುವಕ ಆತ್ಮಹತ್ಯೆ

ಉಡುಪಿ : ಕೆಲ ದಿನಗಳ ಹಿಂದೆ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಮಾಡಿಕೊಂಡಿದ್ದ ನಗರದ ಶಾಂಭವಿ ಲಾಡ್ಜ್‌ನಲ್ಲಿ ಎ. 19 ರಂದು ಮತ್ತೊಬ್ಬ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಯುವಕನನ್ನು ಕೊಣಾಜೆಯ ನಿವಾಸಿ ಶರತ್‌ ರಾಜ್‌ (31) ಎಂದು ಗುರುತಿಸಲಾಗಿದೆ. ಈತ ಮಂಗಳೂರಿನಲ್ಲಿ ಮೆಡಿಕಲ್‌ ರೆಪ್‌ ಎಂದು ತಿಳಿದುಬಂದಿದೆ.

ಲಾಡ್ಜ್‌ ಹೆಸರು ಬದಲಾವಣೆ
ರಾಜ್ಯ ಮಾತ್ರವಲ್ಲದೇ ಇಡೀ ದೇಶದಲ್ಲಿಯೇ ಸಂಚಲನ ಮೂಡಿಸಿದ್ದ ಸಂತೋಷ್‌ ಆತ್ಮಹತ್ಯೆಯೆ ಪ್ರಕರಣದಿಂದ ಲಾಡ್ಜ್‌ ಹೆಸರಿಗೆ ಧಕ್ಕೆಯಾಗಿತ್ತು. ಆದ್ದರಿಂದ ಮಾಲಕರು ಲಾಡ್ಜ್‌ ಹೆಸರನ್ನು ಬದಲಾಯಿಸಿದ್ದರು. ಇದೀಗ ಮತ್ತೋರ್ವ ಯುವಕ ಆತ್ಮಹತ್ಯೆ ಮಾಡಿಕೊಂಡಿರುವುದು ತೀವ್ರ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

error: Content is protected !!
Scroll to Top