ಚಿಕ್ಕಮಗಳೂರು : ಶೃಂಗೇರಿ ಸುಸಜ್ಜಿತ ಆಸ್ಪತ್ರೆ ಮಂಜೂರಾತಿ ಕಡತವು 15 ವರ್ಷಗಳಿಂದ ಪ್ರಗತಿಯಲ್ಲಿದೆ. ತೀವ್ರ ಅನಾರೋಗ್ಯ ಸಂದರ್ಭದಲ್ಲಿ 100 ಕಿ.ಮೀ. ದೂರದ ಆಸ್ಪತ್ರೆಗೆ ತೆರಳಬೇಕಾದ ಕಾರಣ, ದಯವಿಟ್ಟು ತಮ್ಮ ಹಾಗೂ ನಮ್ಮ ಊರಿನವರ ಸುರಕ್ಷತೆಯ ದೃಷ್ಟಿಯಿಂದ ವಾಹನದಲ್ಲಿ ನಿಧಾನವಾಗಿ ಚಲಿಸಿ ಎಂದು ಬರೆಯಲಾಗಿದೆ. ವಿವಿಧ ಕಾರ್ಯಕ್ರಮಗಳಿಗೆ ಭಾಗವಹಿಸಲು ಸಿ.ಎಂ. ಬೊಮ್ಮಾಯಿ ಎ.19 ರಂದು ಚಿಕ್ಕಮಗಳೂರು ಜಿಲ್ಲೆಗೆ ಭೇಟಿ ನೀಡುತ್ತಿದ್ದು, ಮುಖ್ಯಮಂತ್ರಿ ಭೇಟಿಗೆ ಸ್ವಾಗತ ಕೋರಿ ಅಣಕವಾಡುತ್ತಿರುವ ಬ್ಯಾನರೊಂದು ಪತ್ತೆಯಾಗಿದೆ. ಶೃಂಗೇರಿಯಲ್ಲಿ ಕಳೆದ 15 ವರ್ಷಗಳಿಂದ ಸುಸಜ್ಜಿತ ಆಸ್ಪತ್ರೆಗಾಗಿ ಹೋರಾಟ ನಡೆಸುತ್ತಿದ್ದರೂ, ಸರ್ಕಾರ ಮಾತು ತಪ್ಪುತ್ತಿದೆ. ಹಾಗಾಗಿ ಸಿ.ಎಂ.ಗೆ ಸ್ವಾಗತ ಕೋರಿ ನಿಧಾನವಾಗಿ ಚಲಿಸುವಂತೆ ಬ್ಯಾನರ್ ಹಾಕಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
Recent Comments
ಕಗ್ಗದ ಸಂದೇಶ
on