ಬ್ರಹ್ಮಾವರ : ತಾಳಿ ಕಟ್ಟುವ ವೇಳೆ ವಧು ತನಗೆ ಈ ಮದುವೆ ಇಷ್ಟವಿಲ್ಲವೆಂದು ಮದುವೆಯನ್ನು ತಿರಸ್ಕರಿಸಿದ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ. ವಿದೇಶದಲ್ಲಿ ಉದ್ಯೋಗದಲ್ಲಿರುವ ಬ್ರಹ್ಮಾವರದ ವರನಿಗೆ 4 ತಿಂಗಳ ಹಿಂದೆ ನಿಶ್ವಿತಾರ್ಥವಾಗಿದ್ದು, ರವಿವಾರ ಮದುವೆ ಕಾರ್ಯಕ್ರಮ ನಡೆಯುತ್ತಿತ್ತು. ತಾಳಿ ಕಟ್ಟುವ ಸಂದರ್ಭ ಬಂದಾಗ ವಧು, ವರನನ್ನು ಅಲ್ಲಿಯೇ ಕೊಠಡಿಗೆ ಕರೆದುಕೊಂಡು ಹೋಗಿ ತನಗೆ ಈ ಮದುವೆ ಇಷ್ಟವಿಲ್ಲ. ಬೇರೆ ಪ್ರಪೋಸಲ್ ಇಷ್ಟಪಟ್ಟಿರುವುದಾಗಿ ಸಿನಿಮೀಯ ಶೈಲಿಯಲ್ಲಿ ತಿಳಿಸಿರುತ್ತಾಳೆ. ಮದುವೆ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಯೊಂದಿಗೆ ಸುಮಾರು 1,000 ಮಂದಿಗೆ ಊಟೋಪಾಚಾರದ ವ್ಯವಸ್ಥೆ ಮಾಡಲಾಗಿದ್ದು, ಈ ಬೆಳವಣಿಗೆಯಿಂದ ಎಲ್ಲರೂ ಆಶ್ವರ್ಯಚಕಿತರಾದರು. ಬ್ರಹ್ಮಾವರ ಪೊಲೀಸರ ಮಧ್ಯಸ್ಥಿಕೆಯಲ್ಲಿ ಎರಡೂ ಕಡೆಯವರು ಖರ್ಚಿನ ಸಮಪಾಲು ಭರಿಸಲು ಒಪ್ಪಿದ್ದು, ಪ್ರಕರಣ ಇತ್ಯರ್ಥಗೊಳಿಸಲಾಯಿತು.
Recent Comments
ಕಗ್ಗದ ಸಂದೇಶ
on