Thursday, May 26, 2022
spot_img
Homeಸಿನೆಮಾವಿಶ್ವದಾದ್ಯಂತ ಅಬ್ಬರಿಸಿದ ಕೆಜಿಎಫ್-2 - ನಾಲ್ಕು ದಿನಗಳಲ್ಲಿ 551 ಕೋಟಿ ರೂ. ಗಳಿಕೆ

ವಿಶ್ವದಾದ್ಯಂತ ಅಬ್ಬರಿಸಿದ ಕೆಜಿಎಫ್-2 – ನಾಲ್ಕು ದಿನಗಳಲ್ಲಿ 551 ಕೋಟಿ ರೂ. ಗಳಿಕೆ

ಮುಂಬೈ : ಪ್ರಶಾಂತ್ ನೀಲ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಚಿತ್ರ ಮತ್ತೊಂದು ದಾಖಲೆ ಬರೆದಿದ್ದು, ಹಿಂದಿ ಅವರತರಣಿಕೆಯ ಚಿತ್ರ 200 ಕೋಟಿ ರೂ ಗಳಿಕೆ ಕ್ಲಬ್ ಸೇರಿದೆ.
ಕೆಜಿಎಫ್ ಚಿತ್ರ ಎ. 14ರಂದು ತೆರೆಕಂಡಿದ್ದು, ವಿಶ್ವಾದ್ಯಂತ ಗಳಿಸಿರುವ ಒಟ್ಟು ಗಳಿಕೆ 550 ಕೋಟಿ ರೂ. ಗಡಿದಾಟಿದ್ದು, ಚಿತ್ರ ಕೇವಲ ನಾಲಕ್ಕು ದಿನದಲ್ಲಿ 551 ಕೋಟಿ ರೂ ಗಳಿಕೆ ಕಂಡಿದೆ ಎಂದು ಬಾಕ್ಸ್ ಆಫೀಸ್ ತಜ್ಞ ಮನೋಬಲ ವಿಜಯಬಾಲನ್ ಟ್ವೀಟ್ ಮಾಡಿದ್ದಾರೆ.
ಎ. 14ರಂದು ತೆರೆಕಂಡಿದ್ದರಿಂದ ನಂತರದ ರಜಾ ದಿನಗಳ ಜೊತೆಗೆ ವೀಕೆಂಡ್ ಸಹ ಸಿಕ್ಕಿದ್ದು ಚಿತ್ರಕ್ಕೆ ಅನುಕೂಲವಾಗಿದೆ. ವಿಶ್ವದಾದ್ಯಂತ 10 ಸಾವಿರಕ್ಕೂ ಅಧಿಕ ತೆರೆಗಳಲ್ಲಿ ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಚಿತ್ರ ತೆರೆಕಂಡಿತ್ತು. ಮೊದಲ ದಿನ 165.37 ಕೋಟಿ ರೂ., ಎರಡನೇ ದಿನ 139.25 ಕೋಟಿ ರೂ., ಮೂರನೇ ದಿನ 115.08 ಕೋಟಿ ರೂ. ಮತ್ತು ನಾಲ್ಕನೇ ದಿನ ಭಾನುವಾರ ರೂಪಾಯಿ 132.13 ಕೋಟಿ ಗಳಿಕೆ ಸೇರಿ ಒಟ್ಟು 551.83 ಕೋಟಿ ರೂ. ಗಳಿಸಿದೆ ಎಂದು ಅವರು ತಿಳಿಸಿದ್ಧಾರೆ.

ದಾಖಲೆಗಳನ್ನು ಬರೆದ ಕೆಜಿಎಫ್-2
ಕೆಜಿಎಫ್-2 ಹಲವು ದಾಖಲೆಗಳ ನಿರ್ಮಾಣ ಮಾಡಿದ್ದು, ಹಿಂದಿ, ಕೇರಳ, ಕರ್ನಾಟಕದಲ್ಲಿ ಸಾರ್ವಕಾಲಿಕ ಅತಿ ದೊಡ್ಡ ಅತೀ ಹೆಚ್ಚು ಗಳಿಕೆ ಕಂಡ ಮೊದಲ ಚಿತ್ರ ಎಂಬ ಕೀರ್ತಿಗೆ ಭಾಜನವಾಗಿದೆ. ಅಂತೆಯೇ 500 ಕೋಟಿ ರೂ ಕ್ಲಬ್‌ಗೆ ಪ್ರವೇಶಿಸಿದ ಕನ್ನಡ ಚಿತ್ರರಂಗದ ಚಲನಚಿತ್ರ ಇದಾಗಿದ್ದು, ಹಿಂದಿಯೂ ಸೇರಿದಂತೆ ಭಾರತೀಯ ಚಲನಚಿತ್ರಗಳಲ್ಲೇ ಆರಂಭಿಕ ವಾರಾಂತ್ಯದಲ್ಲಿ ಸಾರ್ವಕಾಲಿಕ ಅತ್ಯಧಿಕ ಗಳಿಕೆ ಕಂಡ ಚಿತ್ರ ಎಂಬ ಕೀರ್ತಿಗೂ ಭಾಜನವಾಗಿದೆ.
ಅಂತಾರಾಷ್ಟ್ರೀಯ ಚಿತ್ರಪಟ್ಟಿಯಲ್ಲಿ ತೆರೆಕಂಡು ವಾರಾಂತ್ಯದಲ್ಲಿ (ಎ.15-17)ಅತ್ಯಧಿಕ ಗಳಿಕೆ 2ನೇ ಚಿತ್ರ ಎಂಬ ಕೀರ್ತಿಗೂ ಕೆಜಿಎಫ್-2 ಪಾತ್ರವಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!