ಚಿಕ್ಕಮಗಳೂರು : ಗೋವುಗಳನ್ನು ಕಡಿದು ಅಕ್ರಮವಾಗಿ ಗೋ ಮಾಂಸ ಬೇರ್ಪಡಿಸುವಾಗ ದಾಳಿ ಮಾಡಿದ ಪೋಲಿಸರ ಮೇಲೆ ಹಲ್ಲೆಗೆ ಯತ್ನಿಸಿ ಆರೋಪಿಗಳು ಪರಾರಿಯಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಹೇರೂರು ಗ್ರಾಮದಲ್ಲಿ ನಡೆದಿದೆ.
ರಾಮೇಗೌಡ ಎಂಬವರಿಗೆ ಸೇರಿದ ಕಾಫಿ ತೋಟದ ಲೈನ್ನಲ್ಲಿ ಗೋವುಗಳನ್ನು ಕಡಿದು ಅಕ್ರಮವಾಗಿ ಮಾರಾಟ ಮಾಡುತ್ತಿದ್ದರ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಮಾರುವೇಶದಲ್ಲಿ ದಾಳಿ ನಡೆಸಿದ್ದಾರೆ. ಈ ವೇಳೆ ಕಾರ್ಮಿಕನ ಮನೆಯೊಂದರಲ್ಲಿ ಐದು ಜನ ಹಸುವೊಂದನ್ನು ಕಡಿಯುತ್ತಿದ್ದು, ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆದು ಹಲ್ಲೆಗೆ ಯತ್ನಿಸಿ ಕತ್ತಲಲ್ಲಿ ನದಿಗೆ ಹಾರಿ ಪರಾರಿಯಾಗಿದ್ದಾರೆ.
ಸ್ಥಳದಲ್ಲಿ ಒಂದು ಕ್ವಿಂಟಾಲ್ ಗೋ ಮಾಂಸ, ಕತ್ತರಿಸಿದ ದನದ ಕಾಲು ಪತ್ತೆಯಾಗಿದ್ದು, ಆರೋಪಿಗಳು ಹಲವೆಡೆಯಿಂದ ಗೋವುಗಳನ್ನು ಕದ್ದು ತಂದು ಮಾಂಸ ಮಾರಾಟ ಮಾಡುತ್ತಿದ್ದರೆಂದು ತಿಳಿದುಬಂದಿದೆ.
ಜನನಿಬಿಡ ಪ್ರದೇಶದಲ್ಲಿ ಅಕ್ರಮ ಕಸಾಯಿಖಾನೆ – ಪೋಲೀಸರು ಮಾರುವೇಷದಲ್ಲಿ ದಾಳಿ
Recent Comments
ಕಗ್ಗದ ಸಂದೇಶ
on