ಲಕ್ನೋ: ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿರುವ ಅಂಗಡಿಯೊಂದರಲ್ಲಿ ‘ಪಾಕಿಸ್ತಾನ ಪರ ಘೋಷಣೆ’ ಇರುವ ಹಾಡು ಹಾಕಿದ್ದ ಇಬ್ಬರು ಅಪ್ರಾಪ್ತ ಯುವಕರು ಎ. 14 ರಂದು ಪೊಲೀಸರ ಅತಿಥಿಗಳಾಗಿದ್ದಾರೆ.
ಬರೇಲಿಯ ಸಿಂಘೈ ಕಲಾನ್ ಗ್ರಾಮದಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದ ಇಬ್ಬರು ಮುಸ್ಲಿಂ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ‘ಪಾಕಿಸ್ತಾನಕ್ಕೆ ಜಿಂದಾಬಾದ್’ ಘೋಷಣೆ ಇರುವ ಹಾಡನ್ನು ಈ ಯುವಕರು ಹಾಕಿದ್ದು, ಇದನ್ನು ಆಕ್ಷೇಪಿಸಿದ ಬಿಜೆಪಿ ಮುಖಂಡರೊಬ್ಬರು ಅಂಗಡಿಯತ್ತ ಬಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ಬಳಿಕ ಈ ಇಬ್ಬರು ಯುವಕರು ಹಾಡನ್ನು ನಿಲ್ಲಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಸ್ಥಳೀಯ ಬಿಜೆಪಿ ನಾಯಕರು ಪೊಲೀಸರಿಗೆ ದೂರು ಸಲ್ಲಿಸಿದ್ದು, ಈ ದೂರಿನನ್ವಯ ಇದೀಗ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಪೊಲೀಸರು ನೀಡಿದ್ದಾರೆ.
ಈ ಮಧ್ಯೆ ಆರೋಪಿಯೋರ್ವನ ತಾಯಿ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದು, ನನ್ನ ಪುತ್ರ ಮೊಬೈಲ್ನಲ್ಲಿ ಧಾರ್ಮಿಕ ಹಾಡುಗಳನ್ನು ಕೇಳುವ ಹವ್ಯಾಸ ಹೊಂದಿದ್ದಾನೆ. ಅವನಿಗೆ ಆ ಹಾಡಿನಲ್ಲಿ ಅಂತಹ ಘೋಷಣೆಗಳಿವೆ ಎಂಬುದು ಗೊತ್ತಿರಲಿಲ್ಲ. ಆತ ಅವಿದ್ಯಾವಂತ. ಅವನನ್ನು ಬಿಡುಗಡೆ ಮಾಡಿ ಎಂದು ಪೊಲೀಸರಲ್ಲಿ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಉತ್ತರ ಪ್ರದೇಶ : ಪಾಕ್ ಪರ ಘೋಷಣೆಯ ಹಾಡು ಹಾಕಿದ ಯುವಕರ ಬಂಧನ
Recent Comments
ಕಗ್ಗದ ಸಂದೇಶ
on