ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಸುಧಾರಿತ ಸ್ಪೋಟಕ ಸಾಧನಗಳು ಪತ್ತೆಯಾಗಿರುವುದಾಗಿ ಮೂಲಗಳು ತಿಳಿಸಿವೆ.
ರಜೌರಿ ಜಿಲ್ಲೆಯ ಹೆದ್ದಾರಿ ಮತ್ತು ಸೇನಾ ಶಿಬಿರದ ಸಮೀಪ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿವೆ. ಈ ಸಂದರ್ಭದಲ್ಲಿ ಐದು ಕೆಜಿಗಳಷ್ಟು ತೂಕವಿರುವ ಸುಧಾರಿತ ಸ್ಪೋಟಕ ಸಾಧನಗಳು ಪತ್ತೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂಬಂಧ ರಜೌರಿ ಜಿಲ್ಲಾ ಪೊಲೀಸ್ ಹೇಳಿಕೆ ನೀಡಿದ್ದು, ಜಿಲ್ಲೆಯ ಗುರ್ದಾನ್ ರಸ್ತೆಯಲ್ಲಿರುವ ಸುಧಾರಿತ ಸ್ಪೋಟಕ ಸಾಧನಗಳನ್ನು ವಶಕ್ಕೆ ತೆಗೆದುಕೊಳ್ಳುವ ಮೂಲಕ ಉಗ್ರರ ಸಂಚನ್ನು ವಿಫಲಗೊಳಿಸಲಾಗಿದೆ. ವಶಕ್ಕೆ ತೆಗೆದುಕೊಳ್ಳಲಾದ ಸ್ಪೋಟಕ ವಸ್ತುಗಳನ್ನು ಸುರಕ್ಷಿತ ಪ್ರದೇಶಕ್ಕೆ ಒಯ್ದು ನಿಷ್ಕ್ರಿಯಗೊಳಿಸಲಾಗಿದೆ ಎಂದು ತಿಳಿಸಿದೆ.
ಜಮ್ಮು ಕಾಶ್ಮೀರ : ಭದ್ರತಾ ಪಡೆಗಳಿಂದ ಸುಧಾರಿತ ಸ್ಪೋಟಕ ಸಾಧನಗಳ ವಶ
Recent Comments
ಕಗ್ಗದ ಸಂದೇಶ
on