ಕಾರ್ಕಳ : ಕಂದಾಯ ಸೇರಿದಂತೆ ಸರಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಗ್ರಾಮ ವಾಸ್ತವ್ಯದಲ್ಲಿ ಕಾರ್ಯನಿರ್ವಹಿಸುವುದರಿಂದ ಸಾರ್ವಜನಿಕರ ಬಹಳಷ್ಟು ಸಮಸ್ಯೆಗಳು ಪರಿಹಾರವಾಗುತ್ತಿದೆ ಎಂದು ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಹೇಳಿದರು.
ಅವರು ಎ. 16ರಂದು ದುರ್ಗ ಗ್ರಾಮದ ತೆಳ್ಳಾರು ಕನ್ನಡಿ ಶ್ರೀ ಜಲದುರ್ಗ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಗ್ರಾಮ ವಾಸ್ತವ್ಯದಲ್ಲಿ ಮಾತನಾಡಿದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ನಾಯಕ್ ಮಾತನಾಡಿ, ದುರ್ಗ ಗ್ರಾಮದಲ್ಲಿ 94ಸಿಸಿ ನಿವೇಶನಗಳ ಹಂಚುವಿಕೆಯಾಗಬೇಕು. ಅರಣ್ಯದ ಅಂಚಿನಲ್ಲಿ ವಾಸಿಸುತ್ತಿರುವ ಗ್ರಾಮಸ್ಥರಿಗೆ ಅರಣ್ಯ ಇಲಾಖೆಯು ಒಕ್ಕಲೆಬ್ಬಿಸದೇ ಬದುಕು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡಬೇಕೆಂದರು.
ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಗುರುದತ್ ಗ್ರಾಮ ವಾಸ್ತವ್ಯದ ಕುರಿತು ಮಾತನಾಡಿದರು. ಶಿಕ್ಷಣ ಇಲಾಖೆ, ಕೃಷಿ, ತೋಟಗಾರಿಕೆ ಇಲಾಖೆ, ತಾಲೂಕು ವೈದ್ಯಾಧಿಕಾರಿಗಳು, ಆಹಾರ ನಿರೀಕ್ಷಕರು, ಗ್ರಾಮಾಂತರ ಠಾಣೆ ಎಸ್. ಐ, ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಕಾರ್ಮಿಕ ಅಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ, ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕರು, ಅರಣ್ಯಾಧಿಕಾರಿ, ಪಂಚಾಯತ್ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಪಸ್ಥಿತರಿದ್ದರು. ವಿನೋದ್ ನಾತು ನಾಡಗೀತೆ ಹಾಡಿದರು. ಗ್ರಾಮ ಕರಣಿಕ ರಿಯಾಜ್ ಸ್ವಾಗತಿಸಿ, ಸಂಜೀವ ದೇವಾಡಿಗ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಬಳಿಕ ಅಹವಾಲು ಸ್ವೀಕಾರ ಹಾಗೂ ಫಲಾನುಭವಿಗಳಿಗೆ ಸರಕಾರದ ಸವಲತ್ತು ವಿತರಣೆ ಮಾಡಲಾಯಿತು.
ತಹಶೀಲ್ದಾರ್ ಅವರಿಂದ ದುರ್ಗ ಗ್ರಾಮ ವಾಸ್ತವ್ಯ : ಅಹವಾಲು ಸ್ವೀಕಾರ – ಸರಕಾರದ ಸವಲತ್ತು ವಿತರಣೆ
Recent Comments
ಕಗ್ಗದ ಸಂದೇಶ
on